ದಾದಾ ಸಾಹೇಬ್ ಮತ್ತು ಮಹಾತ್ಮಾ ಗಾಂಧಿ ಅವರ 150ನೇ ಜನುಮದಿನದ ಪ್ರಯುಕ್ತ ಫೆಬ್ರವರಿ 20ರಂದು ಮುಂಬೈನ ತಾಜ್ ಲ್ಯಾಂಡ್ಸ್‌ ಎಂಡ್‌ಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2020ರ ಜ್ಯೂರಿ ಪ್ಯಾನೆಲ್ 'ಮೋಸ್ಟ್ ಪ್ರಾಮಿಸಿಂಗ್ ನಟ' ಎಂಬ ಪ್ರಶಸ್ತಿಯನ್ನು 'ದಬಾಂಗ್ 3' ಚಿತ್ರದ ಅಭಿನಯಕ್ಕಾಗಿ ಅಭಿನಯ ಚಕ್ರವರ್ತಿ ಸುದೀಪ್‌ ಅವರಿಗೆ ನೀಡಲಾಗುತ್ತಿದೆ. ಮಹಾರಾಷ್ಟ್ರದ ಗವರ್ನರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಪ್ರಶಸ್ತಿಗೂ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗೂ ಸಂಬಂಧವಿಲ್ಲ.