ರವಿವಾರ, 19 ಜನವರಿ 2020
5:30 ಪೂರ್ವಾಹ್ನ
Daily PDF
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
Authored by:
Basavaraj Halli
ಭಾರತದೊಂದಿಗಿನ ದೇಶದ ಸಂಬಂಧವನ್ನು ಮುನ್ನಡೆಸುವಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂದಾರ್ ಶಾ ಅವರ ಸೇವೆಯನ್ನು ಪರಿಗಣಿಸಿ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ಆಸ್ಟ್ರೇಲಿಯಾ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಆಸ್ಟ್ರೇಲಿಯಾದ ಭಾರತದ ಹೈಕಮಿಷನರ್ ಹರಿಂದರ್ ಸಿಧು ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜನರಲ್ ವಿಭಾಗದಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾದ ಗೌರವ ಸದಸ್ಯರಾಗಿ ಮಜುಂದಾರ್-ಶಾ ಅವರಿಗೆ ಪ್ರಶಸ್ತಿ ನೀಡಲಿದ್ದಾರೆ.