ರವಿವಾರ, 19 ಜನವರಿ 2020
5:30 ಪೂರ್ವಾಹ್ನ
Daily PDF
ಗುಜರಾತ್ ನಲ್ಲಿ ಟ್ರಂಪ್ ಗಾಗಿ 'ಹೌಡಿ ಮೋದಿ' ಮಾದರಿಯ ಕಾರ್ಯಕ್ರಮ
Authored by:
Basavaraj Halli
ಕಳೆದ ವರ್ಷದ ಸೆಪ್ಟೆಂಬರ್‍ನಲ್ಲಿ ಅಮೆರಿಕಾ ಭೇಟಿ ವೇಳೆ ಭಾರತದ ಪ್ರಧಾನಿ ಹ್ಯೂಸ್ಟನ್ ನಲ್ಲಿ ನಡೆಸಿದ 'ಹೌಡಿ ಮೋದಿ' ಕಾರ್ಯಕ್ರಮದ ಮಾದರಿಯಲ್ಲಿಯೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ತಿಂಗಳು ತಮ್ಮ ಭಾರತ ಭೇಟಿಯ ವೇಳೆ ಕಾರ್ಯಕ್ರಮವೊಂದನ್ನು ನಡೆಸುವ ಸಾಧ್ಯತೆಯಿದೆಯೆಂದು ತಿಳಿದು ಬಂದಿದೆ.
ಟ್ರಂಪ್ ಫೆಬ್ರವರಿ ತಿಂಗಳಲ್ಲಿ ಆಗಮಿಸುವುದು ಖಚಿತವಾದರೂ ಯಾವ ದಿನಾಂಕವೆಂಬುದು ದೃಢಪಟ್ಟಿಲ್ಲ. ತಮ್ಮ ಮೂರು ದಿನಗಳ ಭೇಟಿಯ ವೇಳೆ ರಾಜಧಾನಿ ದಿಲ್ಲಿ ಹೊರತುಪಡಿಸಿ ಅವರು ಭಾರತದ ಇನ್ನೊಂದು ನಗರಕ್ಕೆ ಭೇಟಿ ನೀಡಲಿದ್ದಾರೆ ಹಾಗೂ ಇಲ್ಲಿ ಹ್ಯೂಸ್ಟನ್ ನಲ್ಲಿ ನಡೆದಂತಹುದೇ ಕಾರ್ಯಕ್ರಮ ನಡೆಯಬಹುದು. ಈ ಕಾರ್ಯಕ್ರಮ ಅಹ್ಮದಾಬಾದ್ ನಗರದಲ್ಲಿ ಆಯೋಜಿಸಲ್ಪಟುವ ಸಾಧ್ಯತೆ ಹೆಚ್ಚು, ಪ್ರಧಾನಿ ಮೋದಿ ಕೂಡ ಭಾಗವಹಿಸಲಿದ್ದಾರೆಂದು ಮೂಲಗಳು ತಿಳಿಸಿವೆ.