ಶನಿವಾರ, 18 ಜನವರಿ 2020
5:30 ಪೂರ್ವಾಹ್ನ
Daily PDF
ಕರ್ನಾಟಕ ತಂಡ ಚಿನ್ನದ ಸಾಧನೆ : ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದ ಸೈಕ್ಲಿಂಗ್
Authored by:
Basavaraj Halli
ಗುವಾಹಟಿಯಲ್ಲಿ ನಡೆಯು ತ್ತಿರುವ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಗುರುವಾರ ಕರ್ನಾಟಕವು ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು.
21 ವರ್ಷದೊಳಗಿನವರ ಮಹಿಳೆ ಯರ 4,000 ಮೀಟರ್ ಪರ್ಸ್ಯೂಟ್ ವಿಭಾಗದಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ, ಜಮಖಂಡಿಯ ದಾನಮ್ಮ ಚಿಚಖಂಡಿ, ವಿಜಯಪುರದ ಸಹನಾ ಕುಡಿಗಾನೂರ ಮತ್ತು ರೈಲ್ವೆ ಉದ್ಯೋಗಿ ಮೇಘಾ ಗೂಗಾಡ ಅವರನ್ನು ಒಳಗೊಂಡ ರಾಜ್ಯ ತಂಡ ನಿಗದಿತ ಗುರಿಯನ್ನು ಐದು ನಿಮಿಷ 33.862 ಸೆಕೆಂಡುಗಳಲ್ಲಿ ತಲುಪಿ ಈ ಸಾಧನೆ ಮಾಡಿತು.
ಇದೇ ವಯೋಮಾನದ ಪುರುಷರ 4,000 ಮೀಟರ್ ಪರ್ಸ್ಯೂಟ್ ವಿಭಾಗದಲ್ಲಿ ರಾಜ್ಯ ತಂಡ ಕಂಚಿನ ಪದಕ ಜಯಿಸಿತು.