ಶನಿವಾರ, 18 ಜನವರಿ 2020
5:30 ಪೂರ್ವಾಹ್ನ
Daily PDF
ಯುಪಿಎಸ್ಸಿ: ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ
Authored by:
Basavaraj Halli
ಕೇಂದ್ರ ಲೋಕಸೇವಾ ಆಯೋಗವು ಕಳೆದ ಸೆಪ್ಟೆಂಬರ್‌ನಲ್ಲಿ ನಡೆಸಿದ ಐಎಎಸ್, ಐಎಫ್‌ಎಸ್, ಐಪಿಎಸ್ ಮತ್ತು ಇತರ ಕೇಂದ್ರ ಸೇವೆಗಳ ಹುದ್ದೆಗಳಿಗೆ ನಡೆಸಿದ ಮುಖ್ಯ (ಮೇನ್) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಸಂದರ್ಶನಕ್ಕೆ ಆಯ್ಕೆ ಆದವರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ವೈಯಕ್ತಿಕ ಸಂದರ್ಶನ ಪ್ರಕ್ರಿಯೆಯು ಫೆಬ್ರುವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗಗಳು, ಅಂಗವಿಕಲರು ಅಥವಾ ಮಾಜಿ ಸೈನಿಕ ವರ್ಗಗಳ ಅಡಿಯಲ್ಲಿ ಮೀಸಲಾತಿ ಅಥವಾ ವಿನಾಯಿತಿ ಬಯಸುವವರು ನಾಗರಿಕ ಸೇವೆ ಪೂರ್ವ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದ 2019ರ ಮಾರ್ಚ್ 19ರ ಮೊದಲು ಪಡೆದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.