ಶನಿವಾರ, 18 ಜನವರಿ 2020
5:30 ಪೂರ್ವಾಹ್ನ
Daily PDF
ಡೊನಾಲ್ಡ್ ಟ್ರಂಪ್ ವಾಗ್ದಂಡನೆ: ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭ
Authored by:
Basavaraj Halli
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ವಾಗ್ದಂಡನೆಯ ವಿಚಾರಣೆ ಗುರುವಾರ ಅಮೆರಿಕದ ಸೆನೆಟ್‌ನಲ್ಲಿ ಆರಂಭವಾಗಿದೆ. ಅಮೆರಿಕದ 45ನೇ ಅಧ್ಯಕ್ಷರಾಗಿರುವ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷಾತೀತವಾಗಿ ನಿರ್ಧರಿಸುವುದಾಗಿ ಸೆನೆಟ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದ್ದಾರೆ.
ಅಮೆರಿಕದ ಇತಿಹಾಸದಲ್ಲಿ ಮೂರನೇ ಬಾರಿಗೆ ಈ ಪ್ರಕ್ರಿಯೆಗಾಗಿ ಸೆನೆಟ್ ಸದನ ವಾಗ್ದಂಡನೆಯ ನ್ಯಾಯಾಲಯವಾಗಿ ಬದಲಾಗಿದೆ. ಈ ಸಭೆಯ ಅಧ್ಯಕ್ಷತೆ ವಹಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಸೆನೆಟರ್‌ಗಳಿಗೆ ಪ್ರತಿಜ್ಞೆ ಬೋಧಸಿದರು.