ಶನಿವಾರ, 18 ಜನವರಿ 2020
5:30 ಪೂರ್ವಾಹ್ನ
Daily PDF
2025ರ ವೇಳೆರೆ ಭಾರತಕ್ಕೆ ಎಸ್-400 ಕ್ಷಿಪಣಿ ಪೂರೈಕೆ : ರಷ್ಯಾ
Authored by:
Basavaraj Halli
ಭಾರತೀಯ ಭೂಸೇನಾ ಪಡೆಯ ಶಸ್ತ್ರಾಸ್ತ್ರ ಬಲಕ್ಕೆ ಮತ್ತಷ್ಟು ಪ್ರಬಲ ಶಕ್ತಿ ತುಂಬುವ ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇನ್ನು ಐದು ವರ್ಷಗಳಲ್ಲಿ ಭಾರತಕ್ಕೆ ಸೇರ್ಪಡೆಯಾಗಲಿದೆ. ದೆಹಲಿಯಲ್ಲಿಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ರಷ್ಯಾದ ಯೋಜನೆಯ ಉಪ ಮುಖ್ಯಸ್ಥ ರೋಮನ್ ಬಾಬುಷಿ ಕಿನ್ 2025ರ ವೇಳೆಗೆ ಎಲ್ಲ ಎಸ್-400 ಕ್ಷಿಪಣಿಗಳು ಭಾರತಕ್ಕೆ ಪೂರೈಕೆಯಾಗಲಿವೆ ಎಂದರು.
ರಷ್ಯಾದಲ್ಲಿ ಈಗಾಗಲೇ ಭಾರತಕ್ಕಾಗಿಯೇ ಅತ್ಯಾಧುನಿಕ ಸಾಮಥ್ರ್ಯದ ಎಸ್-400 ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಉತ್ಪಾದನೆ ಕ್ಷಿಪ್ರ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಎಸ್-400 ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಎಸ್-300ನ ಸುಧಾರಿತ ಮಹಾ ಅಸ್ತ್ರವಾಗಿದೆ. ಭೂಮಿಯಿಂದಲೇ ಗಗನದಲ್ಲಿನ ವೈರಿಗಳ ಜೆಟ್ ವಿಮಾನಗಳು ಮತ್ತು ಅತಿವೇಗದ ಡ್ರೋಣ್ ಇತ್ಯಾದಿ ಮಾನವ ರಹಿತ ಅಪಾಯಕಾರಿ ವೈಮಾನಿಕ ಯಂತ್ರಗಳನ್ನು ಹೊಡೆದುರುಳಿಸುವ ಸಾಮಥ್ರ್ಯ ಇದಕ್ಕಿದೆ.