ಶುಕ್ರವಾರ, 17 ಜನವರಿ 2020
5:30 ಪೂರ್ವಾಹ್ನ
Daily PDF
ಎಸ್‌ಸಿಒ ಶೃಂಗ ಸಭೆ: ಪಾಕ್ ಗೆ ಭಾರತ ಆಹ್ವಾನ, ಇಮ್ರಾನ್ ಖಾನ್ ಸಚಿವರನ್ನು ಕಳಿಸುವ ಸಾಧ್ಯತೆ
Authored by:
Basavaraj Halli
ನವದೆಹಲಿ: ಈ ವರ್ಷ ದೆಹಲಿಯಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ ನೀಡಲಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಸಂಪುಟದ ಸಚಿವರೊಬ್ಬರನ್ನು ಪ್ರತಿನಿಧಿಯಾಗಿ ಕಳುಹಿಸುವ ಸಾಧ್ಯತೆ ಇದೆ.
ಈ ಬಾರಿ ಎಸ್‌ಸಿಒ ಶೃಂಗ ಸಭೆಯ ಆತಿಥ್ಯವಹಿಸಿರುವ ಭಾರತ, ಎಲ್ಲ ಎಂಟು ಸದಸ್ಯ ದೇಶಗಳಿಗೆ ಮತ್ತು ನಾಲ್ಕು ವೀಕ್ಷಕ ದೇಶಗಳಿಗೂ ಆಹ್ವಾನ ನೀಡಲಾಗುವುದು ಎಂದು ಗುರುವಾರ ಹೇಳಿದೆ.
ಎಲ್ಲ ಎಂಟು ದೇಶಗಳು ಮತ್ತು ನಾಲ್ಕು ವೀಕ್ಷಕ ದೇಶಗಳಿಗೆ ಹಾಗೂ ಇತರೆ ಅಂತರಾಷ್ಟ್ರೀಯ ಪಾಲುದಾರರಿಗೂ ಆಹ್ವಾನ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್, ಉಜಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ಎಸ್ಸಿಒನ ಎಂಟು ಸದಸ್ಯ ರಾಷ್ಟ್ರಗಳಾಗಿವೆ. ಅಘ್ಗಾನಿಸ್ತಾನ, ಇರಾನ್, ಬೆಲಾರಸ್ ಮತ್ತು ಮಂಗೊಲಿಯಾ ನಾಲ್ಕು ವೀಕ್ಷಕ ರಾಷ್ಟ್ರಗಳಾಗಿವೆ.