ಶುಕ್ರವಾರ, 17 ಜನವರಿ 2020
5:30 ಪೂರ್ವಾಹ್ನ
Daily PDF
ಮಹತ್ವದ ಬದಲಾವಣೆ: ಮಿಖಾಯಿಲ್ ಮಿಶುಸ್ಟಿನ್ ರಷ್ಯಾದ ನೂತನ ಪ್ರಧಾನಿ
Authored by:
Basavaraj Halli
ಮಾಸ್ಕೋ: ಫೆಡರಲ್ ತೆರಿಗೆ ಸೇವೆಯ ಮಾಜಿ ಮುಖ್ಯಸ್ಥ ಮಿಖಾಯಿಲ್ ಮಿಶುಸ್ಟಿನ್ ಅವರನ್ನು ರಷ್ಯಾದ ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂದು ಕ್ರೆಮ್ಲಿನ್ ಗುರುವಾರ ತಿಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಿಶುಸ್ಟಿನ್ ಅವರನ್ನು ನೇಮಕ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ಅದು ಹೇಳಿದೆ.
ಇದಕ್ಕೂ ಮೊದಲು, ಪುಟಿನ್ ಅವರು ಮಿಶುಸ್ಟಿನ್ ಅವರನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಲು ಸ್ಟೇಟ್ ಡುಮಾ ಅನುಮೋದನೆ ನೀಡಿತ್ತು.