ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ಅಮೆರಿಕಕ್ಕೆ ಭಾರತದ ನೂತನ ರಾಯಭಾರಿ ತರಣ್‌ಜಿತ್ ಸಂಧು
Authored by:
Basavaraj Halli
ಅಮೆರಿಕದಲ್ಲಿನ ಭಾರತದ ನೂತನ ರಾಯಭಾರಿಯಾಗಿ ತರಣ್‌ಜಿತ್ ಸಿಂಗ್ ಸಂಧು ಅಧಿಕಾರ ಸ್ವೀಕರಿಸಲಿದ್ದಾರೆ.
ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ಹರ್ಷವರ್ಧನ್ ಶೃಂಗ್ಲಾ ಇತ್ತೀಚೆಗಷ್ಟೇ ಭಾರತಕ್ಕೆ ಹಿಂದಿರುಗಿದ್ದು, ವಿಜಯ್ ಗೋಖಲೆ ಅವರಿಂದ ಜನವರಿ ಅಂತ್ಯಕ್ಕೆ ತೆರವಾಗಲಿರುವ ವಿದೇಶಾಂಗ ಕಾರ್ಯದರ್ಶಿ ಹುದ್ದೆಯನ್ನು ಸ್ವೀಕರಿಸಲಿದ್ದಾರೆ.
ಸಂಧು ಅವರು 2017ರ ಜನವರಿ 24ರಿಂದ ಶ್ರೀಲಂಕಾದಲ್ಲಿ ಹೈಕಮಿಷನರ್ ಆಗಿದ್ದಾರೆ. ಇದಕ್ಕೂ ಮುನ್ನ ಅವರು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ 2013-2017ರ ಅವಧಿಯಲ್ಲಿ ಯೋಜನಾ ಉಪ ಮುಖ್ಯಸ್ಥರಾಗಿದ್ದರು. ಸಂಧು ಅವರನ್ನು ಅಮೆರಿಕದ ರಾಯಭಾರಿಯನ್ನಾಗಿ ನೇಮಿಸುವ ಅಧಿಕೃತ ಆದೇಶ ಇನ್ನೂ ಹೊರಬಂದಿಲ್ಲ.
ಸಿಂಗಪುರದಲ್ಲಿ ಭಾರತದ ಹೈಕಮಿಷನರ್ ಆಗಿರುವ ಜಾವೇದ್ ಅಶ್ರಫ್ ಅವರು ಫ್ರಾನ್ಸ್‌ನಲ್ಲಿ ಭಾರತದ ರಾಯಭಾರಿಯಾಗಲಿದ್ದಾರೆ. ಫ್ರಾನ್ಸ್‌ನಲ್ಲಿದ್ದ ವಿನಯ್ ಕ್ವಾಟ್ರಾ ಅವರು ನೇಪಾಳಕ್ಕೆ ತೆರಳಲಿದ್ದಾರೆ. ನೇಪಾಳದ ರಾಯಭಾರಿ ಮಂಜೀವ್ ಸಿಂಗ್ ಪುರಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ.