ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ಐಸಿಸಿ ವಾರ್ಷಿಕ ಪುರಸ್ಕಾರ:ರೋಹಿತ್ ಶರ್ಮಾ ಏಕದಿನ ಕ್ರಿಕೆಟಿಗ, ವಿರಾಟ್ ಕೊಹ್ಲಿಗೆ 'ಸ್ಪಿರಿಟ್ ಆಫ್ ಕ್ರಿಕೆಟ್' ಪ್ರಶಸ್ತಿ
Authored by:
Basavaraj Halli
ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಳೆದ ವರ್ಷದುದ್ದಕ್ಕೂ ಅಭೂತಪೂರ್ವ ರನ್ ಗಳಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) '2019 ಏಕದಿನ ಕ್ರಿಕೆಟಿಗ' ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಅಲ್ಲದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್' ಪ್ರಶಸ್ತಿಯನ್ನು ಗೆದ್ದಿದ್ದಾರೆ.
32 ವರ್ಷದ ರೋಹಿತ್ ಕಳೆದ ವರ್ಷ ಒಟ್ಟಾರೆ ಏಳು ಏಕದಿನ ಶತಕ ಸೇರಿದಂತೆ 10 ಶತಕಗಳನ್ನು ಗಳಿಸಿಕೊಂಡಿದ್ದಾರೆ.ಇನ್ನು ಏಳು ಏಕದಿನಗಳಲ್ಲಿ ಐದು ಪಂದ್ಯಗಳು 2019 ರ ವಿಶ್ವಕಪ್‌ನ ಭಾಗವಾಗಿದ್ದವು. ಪಂದ್ಯಾವಳಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಹಾಗೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಭಾಜನರಾಗಿದ್ದರು.
ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ವಿಶ್ವಕಪ್ ಹಣಾಹಣಿಯ ಸಂದರ್ಭದಲ್ಲಿ, ಬಾಲ್ ಟ್ಯಾಂಪರಿಂಗ್ ಹಗರಣದ ಮೇಲೆ ಒಂದು ವರ್ಷದ ನಿಷೇಧವನ್ನು ವಿಧಿಸಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಸ್ಮಿತ್‌ಗೆ ಬೇಸರವಾಗುವ ಟೀಕೆಗಳನ್ನು ನಿಲ್ಲಿಸುವಂತೆ ಅಭಿಮಾನಿಗಳನ್ನು ಕೋಹ್ಲಿ ಮನವೊಲಿಸಿದ ರೀತಿ ಅದ್ಭುತವಾಗಿತ್ತು.ಅದಕ್ಕಾಗಿ ಕೊಹ್ಲಿ ಅವರಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.