ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
50 ವರ್ಷ ವಯಸ್ಸಿನ ಮೀನು ಫ್ಲೋರಿಡಾದಲ್ಲಿ ಪತ್ತೆ
Authored by:
Basavaraj Halli
ಅಮೆರಿಕದ ಫ್ಲೋರಿಡಾದ ಮೀನುಗಾರನೊಬ್ಬ ಬರೋಬ್ಬರಿ 158 ಕೆಜಿ ತೂಗುವ ವಾರ್ಸಾವ್ ಗ್ರೂಪರ್ ಎನ್ನುವ ಮೀನನ್ನು ಹಿಡಿದಿದ್ದು, ಈ ಮೀನು ಈಗ ಸುದ್ದಿ ಮಾಡುತ್ತಿದೆ.
ಅದು ಸುದ್ದಿಯಾಗಲು ಮುಖ್ಯ ಕಾರಣ ಅದರ ವಯಸ್ಸು. ತಜ್ಞರ ಪ್ರಕಾರ ಅದರ ವಯಸ್ಸು 50 ಆಗಿದ್ದು ಈವರೆಗೆ ಹಿಡಿದ ಅತ್ಯಂತ ಹಳೆಯ ಗ್ರೂಪರ್ ಮೀನು ಇದಾಗಿದೆ. ಆದ್ದರಿಂದ ಇದರ ಅಂಗಗಳು ಸಂಶೋಧಕರಿಗೆ ಬೇಕಾಗಿವೆ.
ಜೇಸನ್ ಬೊಯಾಲ್ ಎನ್ನುವ ಮೀನುಗಾರ ಡಿಸೆಂಬರ್ 29ರಂದು ಇದನ್ನು 600 ಅಡಿ ಆಳದಲ್ಲಿ ಹಿಡಿದಿದ್ದಾರೆ.ಅದರ ಒಟೊಲಿತ್ ಎನ್ನುವ ಅಂಗ ಬಹಳ ಪ್ರಮುಖವಾದದ್ದು ಎಂದು ಎಫ್‌ಡಬ್ಲ್ಯೂಸಿ ಎನ್ನುವ ಮೀನು ಸಂಶೋಧನಾ ಸಂಸ್ಥೆ ತಿಳಿಸಿದೆ.