ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ವಿತರಣೆ
Authored by:
Surekha Halli
ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ನಡೆದ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರಿಗೆ ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಬಾಲಿವುಡ್ ಗಾಯಕಿ ಮಧುಶ್ರೀ ಭಟ್ಟಾಚಾರ್ಯ, ಸಿದ್ದನಕೊಳ್ಳ ಕ್ಷೇತ್ರವು ಧಾರ್ಮಿಕವಾಗಿರುವ ಪವಿತ್ರ ಕ್ಷೇತ್ರವಾಗಿದೆ. ನಾನು ಕಳೆದ ವರ್ಷ ಕೂಡಾ ಸಿದ್ದಶ್ರೀ ಉತ್ಸವದಲ್ಲಿ ಈ ಕ್ಷೇತ್ರಕ್ಕೆ ಬಂದು ಹೋಗಿದ್ದು ಇಲ್ಲಿಯ ಶಾಂತಿ ನೆಮ್ಮದಿ ಮತ್ತು ಸಿದ್ದನಕೊಳ್ಳದ ನಿರಂತರ ದಾಸೋಹ ಮಠದಲ್ಲಿ ಡಾ.ಶಿವಕುಮಾರ್ ಶ್ರೀಗಳು ಸಮಾಜ ಸೇವೆ ಜೊತೆಯಲ್ಲಿ ಕಲಾವಿದರನ್ನು ಪ್ರೋತ್ಸಾಹ ನೀಡುವಂತ ಕೆಲಸ ಮಾಡುತ್ತಿದ್ದಾರೆ ಇದು ಶ್ಲಾಘನೀಯ ಕಾರ್ಯ ಎಂದರು.