ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ಮೊದಲ ಏಕದಿನ ಪಂದ್ಯ : ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ ಆಸ್ಟ್ರೇಲಿಯಾ
Authored by:
Basavaraj Halli
ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಉತ್ಸಾಹದಲ್ಲಿದ್ದ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳಿಂದ ಭಾರಿ ಸೋಲು ಅನುಭವಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 255 ರನ್ ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 258 ರನ್ ಬಾರಿಸಿ ಭರ್ಜರಿ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾ ಪರ ಆರಂಭಿಕರಾದ ಡೇವಿಡ್ ವಾರ್ನರ್ ಅಜೇಯ 128 ಮತ್ತು ಆರೋನ್ ಪಿಂಚ್ ಅಜೇಯ 110 ರನ್ ಬಾರಿಸಿದ್ದಾರೆ.
ಭಾರತ ಪರ ಶಿಖರ್ ಧವನ್ 74, ಕೆಎಲ್ ರಾಹುಲ್ 47, ವಿರಾಟ್ ಕೊಹ್ಲಿ 16, ರಿಷಬ್ ಪಂತ್ 28 ಮತ್ತು ರವೀಂದ್ರ ಜಡೇಜಾ 25 ರನ್ ಬಾರಿಸಿದ್ದಾರೆ.