ಗುರುವಾರ, 16 ಜನವರಿ 2020
5:30 ಪೂರ್ವಾಹ್ನ
Daily PDF
ಟೆನ್ನಿಸ್ ಅಂಗಳಕ್ಕೆ ಭರ್ಜರಿ ರೀ ಎಂಟ್ರಿ ಕೊಟ್ಟ ಸಾನಿಯಾ
Authored by:
Basavaraj Halli
ಪ್ರತಿಷ್ಠಿತ ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳಿಗೆ ಭಜನರಾಗಿರುವ ಸಾನಿಯಾ ಮಿರ್ಜಾ ಭಾರತದ ಅತ್ಯಂತ ಖ್ಯಾತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ.
ಅಕ್ಟೋಬರ್ 2017ರ ಚೀನಾ ಓಪನ್ ಬಳಿಕ ಹೆರಿಗೆ ಕಾರಣಕ್ಕಾಗಿ ಸಾನಿಯಾ ಟೆನ್ನಿಸ್ ಅಂಗಳದಿಂದ ದೂರವೇ ಉಳಿದಿದ್ದರು.
ಇದೀಗ ಕೋರ್ಟ್‌ಗೆ ಭರ್ಜರಿಯಾಗಿ ರೀಎಂಟ್ರಿ ಕೊಟ್ಟಿರುವ ಸಾನಿಯಾ, ತಮ್ಮ ಪಾರ್ಟ್ನರ್ ನಾದಿಯಾ ಕಿಚೆನೊಕ್ ಜೊತೆಗೂಡಿ ಹೋಬರ್ಟ್ ಇಂಟರ್‌ನ್ಯಾಷನಲ್ ಟೆನಿಸ್ ಕೂಟದ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ 2-6, 7-6, 10-3 ಸೆಟ್‌ಗಳನೇರ ಗೆಲುವಿನ ಮೂಲಕ ಕ್ಯಾರ್ಟರ್ ಪೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸ್ಟಾರ್ ಆಟಗಾರ್ತಿಯರಾದ ಒಕ್ಸಾನಾ ಕಲಾಶ್ನಿಕೋವಾ ಮತ್ತು ಮಿಯು ಕಾಟೋ ಜೋಡಿಯನ್ನು ಸಾನಿಯಾ ಹಾಗೂ ಕಿಚೆನೋಕ್ ಜೋಡಿ ಮಣಿಸಿದೆ.