ದೋಹಾ: ಭಾರತದ ರೋಹನ್‌ ಬೋಪಣ್ಣ ವರ್ಷಾರಂಭದಲ್ಲೇ ಟೆನಿಸ್‌ ಸಡಗರ ತಂದಿತ್ತಿದ್ದಾರೆ. ನೆದರ್ಲೆಂಡ್ಸ್‌ನ ವೆಸ್ಲಿ ಕೂಲೋಫ್ ಜತೆಗೂಡಿ ಕತಾರ್‌ ಓಪನ್‌ ಪುರುಷರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಫೈನಲ್‌ನಲ್ಲಿ 3ನೇ ಶ್ರೇಯಾಂಕದ ಬೋಪಣ್ಣ-ಕೂಲೋಫ್ ಜತೆಗೂಡಿ ಲ್ಯೂಕ್‌ ಬಾಂಬ್ರಿಜ್‌ (ಬ್ರಿಟನ್‌)-ಸ್ಯಾಂಟಿಯಾಗೊ ಗೊಂಜಾಲೆಜ್‌ (ಮೆಕ್ಸಿಕೊ) ವಿರುದ್ಧ 3-6, 6-3, 10-6 ಅಂತರದ ಜಯ ಸಾಧಿಸಿದರು. “ನಾನು ಕೂಲೋಫ್ ಜತೆಯಾಗಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. ಮೊದಲ ಪ್ರಯತ್ನದಲ್ಲೇ ನಮಗೆ ಗೆಲುವು ಒಲಿದದ್ದು ಅತ್ಯಂತ ಖುಷಿಯ ಸಂಗತಿ’ ಎಂಬುದಾಗಿ ರೋಹನ್‌ ಬೋಪಣ್ಣ ಪ್ರತಿಕ್ರಿಯಿಸಿದ್ದಾರೆ.