ರವಿವಾರ, 12 ಜನವರಿ 2020
5:30 ಪೂರ್ವಾಹ್ನ
Daily PDF
ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದನ್ನು ಒಪ್ಪಿಕೊಂಡ ಇರಾನ್
Authored by:
Basavaraj Halli
ಟೆಹರಾನ್,ಜ.11: ಉಕ್ರೇನ್ ವಿಮಾನವನ್ನು ತನ್ನ ಸೇನೆಯು ಅನುದ್ದಿಷ್ಟವಾಗಿ ಹೊಡೆದುರುಳಿಸಿತ್ತು ಎಂದು ಇರಾನ್ ಶನಿವಾರ ಪ್ರಕಟಿಸಿದೆ. 176 ಜನರನ್ನು ಬಲಿ ತೆಗೆದುಕೊಂಡ ಉಕ್ರೇನ್ ವಿಮಾನ ಪತನಕ್ಕೆ ಇರಾನ್ ಕಾರಣವೆಂಬ ಪಾಶ್ಚಾತ್ಯ ಆರೋಪಗಳನ್ನು ಸರಕಾರವು ಪದೇ ಪದೇ ನಿರಾಕರಿಸುತ್ತಲೇ ಬಂದಿತ್ತು.
ಬಾಗ್ದಾದ್‌ನಲ್ಲಿ ಅಮೆರಿಕನ್ ವಾಯುದಾಳಿಯಲ್ಲಿ ತನ್ನ ಹಿರಿಯ ಸೇನಾಧಿಕಾರಿ ಕಾಸಿಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಬುಧವಾರ ನಸುಕಿನಲ್ಲಿ ಇರಾಕ್‌ನಲ್ಲಿಯ ಅಮೆರಿಕದ ಎರಡು ಸೇನಾನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬೆನ್ನಿಗೇ ಉಕ್ರೇನ್ ವಿಮಾನವು ಪತನಗೊಂಡಿತ್ತು. 82 ಇರಾನ್ ಪ್ರಜೆಗಳು ಸೇರಿದಂತೆ 167 ಪ್ರಯಾಣಿಕರು ಮತ್ತು ಪೈಲಟ್‌ಗಳು ಸೇರಿದಂತೆ ಒಂಭತ್ತು ಸಿಬ್ಬಂದಿಗಳು ಮೃತಪಟ್ಟಿದ್ದರು.