ಶನಿವಾರ, 11 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತ-ಪಾಕಿಸ್ತಾನದಲ್ಲಿ ಮಾತ್ರ ಆರ್ಥಿಕ ಪ್ರಗತಿ ಕುಂಠಿತ: ವಿಶ್ವಬ್ಯಾಂಕ್ ವರದಿ
Authored by:
Basavaraj Halli
ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಪ್ರಗತಿಯು ಹೆಚ್ಚು ಕುಂಠಿತಗೊಂಡಿರುವುದು ಭಾರತ ಮತ್ತು ಪಾಕಿಸ್ತಾನದಲ್ಲಿ ಎಂದು ವಿಶ್ವಬ್ಯಾಂಕ್ ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.
''2019ರಲ್ಲಿ ದಕ್ಷಿಣ ಏಷ್ಯಾದ ಆರ್ಥಿಕ ಪ್ರಗತಿಯು 4.9 ಪರ್ಸೆಂಟ್‌ಗೆ ಕುಸಿದಿದೆ. ಆದರೆ ಅದಕ್ಕೂ ಹಿಂದಿನ ವರ್ಷ ಪ್ರಗತಿಯ ಪ್ರಮಾಣವು 7.1ರಷ್ಟಿತ್ತು. ಅದರಲ್ಲೂ ಪ್ರಮುಖವಾಗಿ ಭಾರತ-ಪಾಕಿಸ್ತಾನ ದೇಶದಲ್ಲಿ ಪ್ರಗತಿ ಪ್ರಮಾಣವು ತೀವ್ರ ಕುಸಿದಿದೆ. ಭಾರತದ ವ್ಯಾಪಾರ ಆತ್ಮವಿಶ್ವಾಸದ ಕೊರತೆ, ಸಾಲದ ಕೊರತೆ ಮತ್ತು ಹೂಡಿಕೆ ಕುಸಿತದ ಜೊತೆಗೆ ಗ್ರಾಹಕರ ಬಳಕೆಯು ತೀವ್ರವಾಗಿ ಕುಸಿದಿದೆ'' ಎಂದು ವಿಶ್ವಬ್ಯಾಂಕ್ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಹೇಳಿದೆ.