ಶನಿವಾರ, 11 ಜನವರಿ 2020
5:30 ಪೂರ್ವಾಹ್ನ
Daily PDF
ಶೀಘ್ರದಲ್ಲೇ ನೌಕಾಪಡೆಗೆ ಸೇರ್ಪಡೆಯಾಗಲಿದೆ ಸಬ್‍ಮರೀನ್ ಧ್ವಂಸಕ 'ವರುಣಾಸ್ತ್ರ'
Authored by:
Basavaraj Halli
ನವದೆಹಲಿ, ಜ.10(ಪಿಟಿಐ)- ಭಾರತೀಯ ನೌಕಾಪಡೆಯ ಬತ್ತಳಿಕೆಗೆ ಮತ್ತೊಂದು ಪ್ರಬಲ ಶಸ್ತ್ರಾಸ್ತ್ರ ಸೇರ್ಪಡೆಯಾಗಲಿದೆ. ಸಬ್‍ಮರೀನ್ (ಜಲಾಂರ್ತಗಾಮಿ) ಧ್ವಂಸ ಮಾಡಬಲ್ಲ ಅತ್ಯಾಧುನಿಕ ಟಾರ್ಪೆಡೋ (ನೌಕಾ ಸ್ಫೋಟಕ) ವರುಣಾಸ್ತ್ರ ಶೀಘ್ರ ನೌಕಾಪಡೆ ಕಾರ್ಯಾಚರಣೆಗೆ ಲಭ್ಯವಾಗಲಿದೆ. ದೇಶೀಯ ನಿರ್ಮಿತ ಭಾರೀ ತೂಕದ ನೌಕಾ ಸ್ಫೋಟಕ ವರುಣಾಸ್ತ್ರ ಕರಾವಳಿ ರಕ್ಷಣಾ ಪಡೆಗಳು ಮತ್ತು ನೌಕಾದಳಕ್ಕೆ ಅತ್ಯಂತ ಪ್ರಬಲ ಜಲಾಸ್ತ್ರವಾಗಲಿದೆ.