ಶನಿವಾರ, 11 ಜನವರಿ 2020
5:30 ಪೂರ್ವಾಹ್ನ
Daily PDF
ರಾಜ್ಯ ಸರಕಾರದಿಂದ ಸಿಹಿ ಸುದ್ದಿ : ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯಡಿ ಮದುವೆಯಾದ ದಂಪತಿಗಳಿಗೆ ಸಿಗಲಿದೆ 50 ಸಾವಿರ ರೂ ಪ್ರೋತ್ಸಾಹ ಧನ
Authored by:
Basavaraj Halli
ಬೆಂಗಳೂರು:ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಯಡಿ ಮದುವೆಯಾದ ದಂಪತಿಗಳಿಗೆ 50 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು. ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಲಾಂಛನ ಮತ್ತು ಕರಪತ್ರ ಬಿಡುಗಡೆ ಮಾಡಿದರು. ಬಳಿಕ ಮಾತನಾಡುತ್ತ ಈ ವಿಷಯ ತಿಳಿಸಿದರು.
ಇದೇ ವೇಳೆ ಅವರು ಮಾತನಾಡುತ್ತ ವಿವಾಹದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಇದು ಸಹಕಾರಿಯಾಗಿದೆ. ಮುಜರಾಯಿ ಇಲಾಖೆಯ ಎ ದರ್ಜೆಯ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ವಧು-ವರರ ಜೋಡಿಗೆ 55,000 ನೀಡಲು ನಿರ್ಧರಿಸಲಾಗಿದೆ.