ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ತಂತಿ ಬೇಲಿಗಳು ಇನ್ನು ಮುಂದೆ ಮತ್ತಷ್ಟು ಗಟ್ಟಿಯಾಗಲಿದ್ದು, ಗಡಿಯಲ್ಲಿ ಶೀಘ್ರ ಅತ್ಯಾಧುನಿಕ, ಕತ್ತರಿಸಲಾಗದ ತಂತಿ ಬೇಲಿ ನಿರ್ಮಾಣ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಬಾಂಗ್ಲಾದೇಶ ಗಡಿಯಲ್ಲಿರುವ ದಶಕಗಳ ಹಳೆಯ ಮುಳ್ಳು ತಂತಿ ಬೇಲಿಗಳನ್ನು ಬದಲಿಸಲು ರಕ್ಷಣಾ ಇಲಾಖೆ ಮುಂದಾಗಿದ್ದು, ಈಗಿರುವ ಬೇಲಿಗಳನ್ನು ಕಿತ್ತು ಅದೇ ಜಾಗದಲ್ಲಿ ಅತ್ಯಾಧುನಿಕ ಮತ್ತು ಕತ್ತರಿಸಲಾಗದ ತಂತಿಬೇಲಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ಲತಿತಿಲಾ ಸಿಲ್ಚಾರ್ ವಲಯದಲ್ಲಿ ಈ ಅತ್ಯಾಧುನಿಕ ಕತ್ತರಿಸಲಾಗದ ತಂತಿಬೇಲಿಗಳ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಾಂಗ್ಲಾ ಗಡಿಯುದ್ದಕ್ಕೂ ವಿಸ್ತರಿಸಲಾಗುತ್ತದೆ ಎಂದು ತಿಳಿದುಬಂದಿದೆ.