➤ ಸೆಪ್ಟೆಂಬರ್ 18, 2026 ರಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಂಚಿಕೊಂಡ ಮಾಹಿತಿಯಂತೆ, 'ಜಾಗತಿಕ ವಾಣಿಜ್ಯ ವಾತಾವರಣ ಸಮೀಕ್ಷೆ 2026' (Global Business Climate Survey 2026) ರ ವರದಿಯಲ್ಲಿ, ವಿಶ್ವದ 41 ಪ್ರಮುಖ ಮಾರುಕಟ್ಟೆಗಳ ಪೈಕಿ ಭಾರತವು ಪ್ರಥಮ ಸ್ಥಾನವನ್ನು (First Rank) ಪಡೆದುಕೊಂಡಿದೆ. "ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೂ ಭಾರತದ ವಾಣಿಜ್ಯ ವಾತಾವರಣವು ಸ್ಥಿರತೆ, ಆರ್ಥಿಕ ಪ್ರಗತಿ ಮತ್ತು 'ಸುಲಭ ವ್ಯಾಪಾರ ವಹಿವಾಟು' (Ease of Doing Business) ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಮಾದರಿಯಾಗಿ ಹೊರಹೊಮ್ಮಿದೆ" ಎಂದು ಸಚಿವರು ತಿಳಿಸಿದ್ದಾರೆ.
➤ ಸಮೀಕ್ಷೆಯ ಪ್ರಮುಖ ಅಂಶಗಳು:
- ಸಮೀಕ್ಷೆ ನಡೆಸಿದ ಸಂಸ್ಥೆ: ಸ್ವೀಡನ್ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ (Swedish Chamber of Commerce in India - SCCI) ಹಾಗೂ ಬಿಸಿನೆಸ್ ಸ್ವೀಡನ್.
- ವ್ಯಾಪ್ತಿ: ಜಗತ್ತಿನ 41 ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರವರ್ತಿಸುತ್ತಿರುವ ಸ್ವೀಡಿಶ್ ಕಂಪನಿಗಳ (ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 213 ಸ್ವೀಡಿಶ್ ಕಂಪನಿಗಳು ಸೇರಿ) ಅಭಿಪ್ರಾಯ ಮತ್ತು ಹೂಡಿಕೆ ವಾತಾವರಣವನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಲಾಗಿದೆ.
- ಏಷ್ಯಾವೆಸ್ಟ್-ಪೆಸಿಫಿಕ್ (APAC) ಭರವಸೆ: ಜಾಗತಿಕವಾಗಿ ಏಷ್ಯಾ-ಪೆಸಿಫಿಕ್ ಪ್ರದೇಶವು ಸ್ವೀಡಿಶ್ ಸಂಸ್ಥೆಗಳಿಗೆ ಅತ್ಯಂತ ಆಶಾದಾಯಕ ವಲಯವಾಗಿ ಮೂಡಿಬಂದಿದೆ. ಈ ವಲಯದಲ್ಲಿ ಭಾರತ ಮತ್ತು ವಿಯೆಟ್ನಾಂ ದೇಶಗಳು ಹೆಚ್ಚಿನ ನಂಬಿಕೆ ಮತ್ತು ಬೆಳವಣಿಗೆಯ ಭರವಸೆಯನ್ನು ತೋರಿಸಿವೆ.
- ಹೆಚ್ಚಿನ ಆರ್ಥಿಕ ಪ್ರಗತಿಯ ಭರವಸೆ: ಸ್ವೀಡಿಶ್ ಸಂಸ್ಥೆಗಳು ಜಾಗತಿಕವಾಗಿ ಅತಿ ಹೆಚ್ಚು ಆರ್ಥಿಕ ಪ್ರಗತಿಯನ್ನು ನಿರೀಕ್ಷಿಸುತ್ತಿರುವ ದೇಶಗಳಲ್ಲಿ ಭಾರತ, ಫಿಲಿಪೈನ್ಸ್ ಮತ್ತು ಪೋಲೆಂಡ್ ಮೊದಲ ಸಾಲಿನಲ್ಲಿವೆ.
- ಹೂಡಿಕೆ ಹೆಚ್ಚಳ (Investment Trends):
ಜಾಗತಿಕವಾಗಿ ಸುಮಾರು 44% ಸ್ವೀಡಿಶ್ ಸಂಸ್ಥೆಗಳು 2026 ರಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ಯೋಜಿಸಿವೆ.
ಭಾರತ ಮತ್ತು ಫಿಲಿಪೈನ್ಸ್ ಜಾಗತಿಕ ಮಟ್ಟದಲ್ಲಿ ಸ್ವೀಡಿಶ್ ಹೂಡಿಕೆದಾರರನ್ನು ಅತ್ಯಂತ ವೇಗವಾಗಿ ಆಕರ್ಷಿಸುತ್ತಿರುವ ಪ್ರಮುಖ ತಾಣಗಳಾಗಿವೆ.
ಶನಿವಾರ, 19 ಸೆಪ್ಟೆಂಬರ್ 2026
3:07 ಅಪರಾಹ್ನ
Daily PDF
ಜಾಗತಿಕ ವಾಣಿಜ್ಯ ಸುಗಮತೆ: ಸ್ವೀಡಿಶ್ ಸಮೀಕ್ಷೆಯಲ್ಲಿ ಭಾರತಕ್ಕೆ ಪ್ರಥಮ ಶ್ರೇಯಾಂಕ
Authored by:
Akshata Halli