ಶುಕ್ರವಾರ, 10 ಜನವರಿ 2020
5:30 ಪೂರ್ವಾಹ್ನ
Daily PDF
ಬ್ರಿಟನ್ ರಾಯಲ್ ಫ್ಯಾಮಿಲಿಗೆ ಹ್ಯಾರಿ ದಂಪತಿ ಗುಡ್ಬೈ..!
Authored by:
Basavaraj Halli
ಲಂಡನ್, ಜ.9-ವಿಶ್ವದ ಅತ್ಯಂತ ಪ್ರತಿಷ್ಠಿತ ಇಂಗ್ಲೆಂಡ್ ಅರಸೊತ್ತಿಗೆಗೆ ಆಘಾತಕಾರಿಯಾಗುವಂಥ ಹಠಾತ್ ಬೆಳವಣಿಗೆಯೊಂದು ನಡೆದಿದೆ. ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ರಾಜಮನೆತನ ತೊರೆದು ಮಹಾರಾಣಿ ಎರಡನೇ ಎಲಿಜಬೆತ್ ಅವರಿಗೆ ಶಾಕ್ ನೀಡಿದ್ದಾರೆ. ಮಹಾರಾಣಿಯವರನ್ನು ಸಂಪರ್ಕಿಸಿದೇ ಹ್ಯಾರಿ ದಂಪತಿ ಕೈಗೊಂಡಿರುವ ಈ ದೃಢ ನಿರ್ಧಾರ ಬ್ರಿಟನ್ ರಾಯಲ್ ಫ್ಯಾಮಿಲಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಾವು ರಾಜಮನೆತನದ ಮುಂಚೂಣಿ ಸದಸ್ಯತ್ವವನ್ನು ತೊರೆದಿದ್ದೇವೆ. ನಾವು ನಮ್ಮ ಉಳಿದ ಜೀವಿತಾವಧಿಯನ್ನು ಉತ್ತರ ಅಮೆರಿಕದಲ್ಲಿ ಕಳೆಯುವುದಾಗಿ ಹ್ಯಾರಿ ಮತ್ತು ಮೇಘನ್ ಘೋಷಿಸಿದ್ದಾರೆ. ಇದಕ್ಕೆ ಸ್ಷಷ್ಟ ಕಾರಣ ತಿಳಿಸಿಲ್ಲ. ಹೀಗಾಗಿ ಇದು ಅನೇಕ ಊಹಾಪೋಹಗಳಿಗೂ ಎಡೆ ಮಾಡಿಕೊಟ್ಟಿದೆ.