ಶುಕ್ರವಾರ, 10 ಜನವರಿ 2020
5:30 ಪೂರ್ವಾಹ್ನ
Daily PDF
ಇರಾನ್ನಲ್ಲಿರುವ ಭಾರತೀಯರ ರಕ್ಷಣೆಗೆ ಐಎನ್‍ಎಸ್ ತ್ರಿಖಂಡ್ ನೌಕೆ ಸಜ್ಜು
Authored by:
Basavaraj Halli
ನವದೆಹಲಿ,ಜ.9-ಸೇನಾಧಿಕಾರಿ ಖಾಸಿಂ ಸುಲೇಮಾನಿ ಹತ್ಯೆ ನಂತರ ಇರಾನ್‍ನಲ್ಲಿ ಭುಗಿಲೆದ್ದಿರುವ ಪ್ರಕ್ಷಬ್ದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಗತ್ಯವೆನಿಸಿದರೆ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯ ಐಎನ್‍ಎಸ್ ತ್ರಿಖಂಡ್ ಹಡಗನ್ನು ಕಳುಹಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಳೆದ ವರ್ಷದ ನವೆಂಬರ್‍ನಿಂದ ಭಾರತೀಯ ನೌಕಾ ಪಡೆಯ ಹಡಗು ಐಎನ್‍ಎಸ್ ತ್ರಿಖಂಡ್ ಗಲ ಆಫ್ ಒಮಾನ್‍ನಲ್ಲಿದೆ. ಒಂದು ವೇಳೆ ಅಗತ್ಯ ಬಿದ್ದರೆ ಇರಾನ್‍ನಿಂದ ಭಾರತೀಯರನ್ನು ಸ್ಥಳಾಂತರಿಸಲು ತ್ರಿಖಂಡ್ ನೌಕೆಯನ್ನು ಕಳುಹಿಸಲಾಗುವುದು ಎಂದರು.