ಮಂಗಳವಾರ, 07 ಜನವರಿ 2020
5:30 ಪೂರ್ವಾಹ್ನ
Daily PDF
ಸಂಚಾರ ನಿಯಮ ಉಲ್ಲಂಘನೆ
Authored by:
Basavaraj Halli
ನವದೆಹಲಿ (ಪಿಟಿಐ): ಸಂಚಾರ ನಿಯಮ ಉಲ್ಲಂಘನೆಗಾಗಿ ನೂತನ ಮೋಟಾರು ವಾಹನ ಕಾಯ್ದೆಯಡಿ ನಿಗದಿ
ಪಡಿಸುವ ದಂಡದ ಮೊತ್ತವನ್ನು ಯಾವುದೇ ರಾಜ್ಯ ಸರ್ಕಾರ ಕಡಿತಗೊಳಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ರಾಜ್ಯಗಳಿಗೆ ಈ ಸಂಬಂಧ ಸೂಚನೆ ಕಳುಹಿಸಿರುವ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ‘ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಸಂಸತ್ತು ಅಂಗೀಕರಿಸಿದೆ. ರಾಜ್ಯಗಳು ರೂಪಿಸಿದ ಕಾಯ್ದೆಗೆ ರಾಷ್ಟ್ರಪತಿ ಅನುಮೋದನೆ ಇಲ್ಲದ ಹೊರತು ರಾಜ್ಯಗಳು ದಂಡಶುಲ್ಕ ಕಡಿತಗೊಳಿಸಬಾರದು’ ಎಂದು ತಿಳಿಸಿದೆ.