ಮಂಗಳವಾರ, 07 ಜನವರಿ 2020
5:30 ಪೂರ್ವಾಹ್ನ
Daily PDF
ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಇರಾನ್
Authored by:
Basavaraj Halli
ದುಬೈ, ಜ.6: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವನ್ನು ಇರಾನ್ ಪ್ರಕಟಿಸಿದೆ.
2015ರ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದ ಅನುಸಾರ ತನ್ನ ಸೆಂಟರ್‌ಫ್ಯೂಜ್ (ಗಿರಗಿಣಿ) ಸಂಖ್ಯೆಯನ್ನು ಸೀಮಿತಗೊಳಿಸುವ ಬದ್ಧತೆಯಿಂದ ಹಿಂದೆ ಸರಿಯುವುದಾಗಿ ಇರಾನ್ ಸರ್ಕಾರ ಘೋಷಿಸಿದೆ. ಈ ಮಧ್ಯೆ ಅಮೆರಿಕದಿಂದ ಹತ್ಯೆಗೀಡಾದ ಇರಾನ್ ಸೇನಾಧಿಕಾರಿ ಸುಲೈಮಾನಿಯವರ ಮೃತದೇಹವನ್ನು ಸ್ವಗೃಹಕ್ಕೆ ತಂದಾಗ ಸಾವಿರಾರು ಮಂದಿ, ಇರಾನ್‌ನ ಎರಡನೇ ದೊಡ್ಡ ನಗರವಾದ ಮಶದ್‌ನಲ್ಲಿ ಸೇರಿದ್ದರು. ಇರಾಕ್ ಸಂಸತ್ತು ನಿರ್ಣಯ ಅಂಗೀಕರಿಸಿ, ಅಮೆರಿಕ ಪಡೆಗಳು ತಕ್ಷಣ ಹಿಂದೆ ಸರಿಯುವಂತೆ ಆಗ್ರಹಿಸಿದೆ.