ಖ್ಯಾತ ಒಡಿಸ್ಸಿ ನೃತ್ಯ ಕಲಾವಿದೆ ಮಿನಾತಿ ಮಿಶ್ರಾಸೋಮವಾರ ಮುಂಜಾನೆ ಸ್ವಿಟ್ಜರ್ಲೆಂಡ್‌ನಲ್ಲಿ ನಿಧನರಾದರು. ಆಕೆಗೆ 91 ವರ್ಷ.ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಿಶ್ರಾ ಇತ್ತೀಚೆಗೆ ಕುಸಿದು ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದರುಎಂದು ಕುಟುಂಬ ಮೂಲಗಳು ತಿಳಿಸಿವೆ. ಒಡಿಸ್ಸಿ ಚಳವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದ ಮಿಶ್ರಾ 70 ರ ದಶಕದ ಅಂತ್ಯದವರೆಗೂ ಕಲಾ ಪ್ರದರ್ಶನ ನೀಡುತ್ತಿದ್ದರು.