ಮಂಗಳವಾರ, 07 ಜನವರಿ 2020
5:30 ಪೂರ್ವಾಹ್ನ
Daily PDF
ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ ಕ್ರಮಬದ್ಧ: ಸುಪ್ರೀಂ ಕೋರ್ಟ್
Authored by:
Basavaraj Halli
ನವದೆಹಲಿ: ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ ಕಾಯ್ದೆ 2008 ಕ್ರಮಬದ್ಧವಾಗಿದ್ದು, ಈ ಕಾಯ್ದೆ ಪ್ರಕಾರ ಶಿಕ್ಷಕರ ಆಯ್ಕೆ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಂದು ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಅಲ್ಲದೆ, ಮದರಸಾ ಆಯೋಗ ಕಾಯ್ದೆ 2008 ಅಸಂವಿಧಾನಿಕವಾಗಿದ್ದು, ಸಂವಿಧಾನಬದ್ಧವಾದ ಸಿಂಧುತ್ವ ಹೊಂದಿಲ್ಲ ಎಂದು ಕೊಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದು ಮಾಡಿದೆ. ಮದರಸಾ ವ್ಯವಸ್ಥಾಪನಾ ಮಂಡಳಿ ಆಯ್ಕೆ ಮಾಡಿದ್ದ ಉದ್ಯೋಗಗಳು ಸಿಂಧುತ್ವ ಹೊಂದಿವೆ. ಕಾಯ್ದೆ ಪ್ರಕಾರ ಮದರಸಾಗಳಿಗೆ ಶಿಕ್ಷಕರ ಆಯ್ಕೆಯನ್ನೂ ಆಯೋಗವೇ ನಿರ್ಧರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.