ಮಂಗಳವಾರ, 07 ಜನವರಿ 2020
5:30 ಪೂರ್ವಾಹ್ನ
Daily PDF
ಟ್ರಂಪ್ ತಲೆ ತಂದವರಿಗೆ 575 ಕೋಟಿ ರೂಪಾಯಿ: ಇರಾನ್ ಘೋಷಣೆ
Authored by:
Basavaraj Halli
ಟೆಹರಾನ್ (ಇರಾನ್), ಜ. 6: ಕಳೆದ ವಾರ ಇರಾನ್ ಸೇನಾಧಿಕಾರಿ ಜನರಲ್ ಕಾಸಿಮ್ ಸುಲೈಮಾನಿ ಸಾವಿಗೆ ಕಾರಣವಾದ ವಾಯು ದಾಳಿಯನ್ನು ನಡೆಸುವಂತೆ ಆದೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಲೆ ತಂದವರಿಗೆ 80 ಮಿಲಿಯ ಡಾಲರ್ (ಸುಮಾರು 575 ಕೋಟಿ ರೂಪಾಯಿ) ಬಹುಮಾನವನ್ನು ಇರಾನ್ ಘೋಷಿಸಿದೆ.
ರವಿವಾರ ನಡೆದ ಸುಲೈಮಾನಿಯವರ ಅಂತ್ಯಸಂಸ್ಕಾರದ ವೇಳೆ, ಸರಕಾರಿ ಸುದ್ದಿ ಚಾನೆಲ್‌ಗಳಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. ಟ್ರಂಪ್‌ರನ್ನು ಕೊಲ್ಲುವುದಕ್ಕಾಗಿ ಪ್ರತಿಯೊಬ್ಬ ಇರಾನ್ ಪ್ರಜೆಗೆ ಒಂದು ಡಾಲರ್‌ನಂತೆ (ಸುಮಾರು 72 ರೂಪಾಯಿ) ಮೊತ್ತವನ್ನು ತೆಗೆದಿಡಲಾಗುವುದು ಹಾಗೂ ಅಮೆರಿಕ ಅಧ್ಯಕ್ಷರನ್ನು ಕೊಂದವರಿಗೆ ಈ ಹಣವನ್ನು ನೀಡಲಾಗುವುದು ಎಂಬುದಾಗಿ ಘೋಷಿಸಲಾಗಿದೆ ಎಂದು ಮಿರರ್.ಕೊ.ಯುಕೆ ವರದಿಯೊಂದರಲ್ಲಿ ತಿಳಿಸಿದೆ.