ನವದೆಹಲಿ: ರೈಲ್ವೆ ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ, ದುಮ್ಮಾನಗಳಿಗೆ ದೂರು ನೀಡಲು ರೈಲ್ವೇ ಸಹಾಯವಾಣಿಗೆ ಕರೆ ಮಾಡಲು ನಾನಾ ಸಂಖ್ಯೆಗಳಿಗಾಗಿ ಇನ್ನೂ ಹುಡುಕಾಡಬೇಕಿಲ್ಲ ಹಾಗೂ ತಡಕಾಡಬೇಕಿಲ್ಲ. ಕೇವಲ 139 ಸಂಖ್ಯೆಗೆ ಕರೆ ಮಾಡಿದರೆ, ಅದು ರೈಲ್ವೇ ತ್ವರಿತ ದೂರು ವಿಲೇವಾರಿ ಘಟಕ ಸಂಪರ್ಕಿಸಿ ಪ್ರಯಾಣಿಕರಿಗೆ ಅಗತ್ಯವಾದ ಸಹಾಯ, ನೆರವು ಒದಗಿಸಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.