ಇಸ್ಲಾಮಾಬಾದ್‌: ಆರ್ಥಿಕ ಚೇತರಿಕೆಗಾಗಿ ಪಾಕಿಸ್ತಾನಕ್ಕೆ ಯುಎಇ (ಯುನೈಟೆಡ್‌ ಅರಬ್‌ ಎಮಿರೇಟ್ಸ್‌) 1,400 ಕೋಟಿ ರೂ. ಹೆಚ್ಚುವರಿ ನೆರವು ಘೋಷಿಸಿದೆ. ಉದ್ಯೋಗ ಹಾಗೂ ವ್ಯಾಪಾರ, ವಹಿವಾಟು ವೃದ್ಧಿಸಿಕೊಳ್ಳಲು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಯುಎಐ ತಿಳಿಸಿದೆ. ಗುರುವಾರ ಅಬುಧಾಬಿ ದೊರೆ ಶೇಖ್‌ ಮೊಹಮ್ಮದ್‌ ಜಯೇದ್‌ ಅಲ್‌ ನಹ್ಯಾನ್‌ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದರು. ಭೇಟಿ ಬಳಿಕ ಈ ನೆರವು ಪ್ರಕಟಿಸಲಾಗಿದೆ. ಪಾಕಿಸ್ತಾನಕ್ಕೆ 1400 ಕೋಟಿ ರೂ. ನೀಡುವಂತೆ ಖಲೀಫಾ ಫ‌ಂಡ್‌ಗೆ ಅಬುಧಾಬಿ ದೊರೆ ಆದೇಶಿಸಿದ್ದಾರೆ.