ಕ್ವೀನ್ಸ್ ವಿ.ವಿಗೆ ಹಿಲರಿ ಕುಲಾಧಿಪತಿ
Published by Basavaraj Halli
03 ಜನವರಿ 2020
ವಾಷಿಂಗ್ಟನ್ (ಪಿಟಿಐ): ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಬ್ರಿಟನ್ನ ಬೆಲ್ ಫಾಸ್ಟ್ನ ಕ್ವೀನ್ಸ್ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕಗೊಂಡಿದ್ದಾರೆ. ಹಿಲರಿ ಅವರು, ಈ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡ ಮೊದಲ ಮಹಿಳಾ ಕುಲಾಧಿಪತಿ.
2018ರ ಅಕ್ಟೋಬರ್ನಲ್ಲಿ ಇದೇ ವಿಶ್ವವಿದ್ಯಾಲಯದಿಂದ ಹಿಲರಿ ಗೌರವ ಡಾಕ್ಟರೇಟ್ ಪಡೆದಿದ್ದರು. 11ನೇ ಕುಲಾಧಿಪತಿಯಾಗಿ ಜನವರಿ 1ರಂದು ನೇಮಕಗೊಂಡಿರುವ ಅವರು, ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. 1849ರಲ್ಲಿ ಸ್ಥಾಪಿಸಲಾಗಿರುವ ಕ್ವೀನ್ಸ್ ವಿಶ್ವವಿದ್ಯಾಲಯವು ಬ್ರಿಟನ್ ಮತ್ತು ಐರ್ಲೆಂಡ್ನಲ್ಲಿ ಖ್ಯಾತಿ ಪಡೆದಿದೆ
Source: ಪ್ರಜಾವಾಣಿ ವಾರ್ತೆ