* ಭಾರತದ ಅನುಭವಿ ಟೆನ್ನಿಸ್ ತಾರೆ 43 ವರ್ಷದ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಕ್ವಾರ್ಟರ್-ಫೈನಲ್‌ನಲ್ಲಿ ಬೋಪಣ್ಣ ತಮ್ಮ ಆಸ್ಟ್ರೇಲಿಯಾದ ಜೋಡಿ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಅರ್ಜೆಂಟೀನಾದ ಮ್ಯಾಕ್ಸಿಮೊ ಗೊಂಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5) ಸೆಟ್‌ಗಳಿಂದ ಜಯಗಳಿಸಿದರು.
* ಆ ಮೂಲಕ 43 ವರ್ಷದ ಹಿರಿಯ ಟೆನ್ನಿಸ್ ಆಟಗಾರ, ಈ ಗೆಲುವಿನೊಂದಿಗೆ ATP ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬೋಪಣ್ಣ ಪಾಲಾಗಿದೆ.
* ಪುರುಷರ ಡಬಲ್ಸ್‍ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಸಾಧಿಸಿದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಕೊಡಗಿನವರಾದ ರೋಹನ್ ಬೋಪಣ್ಣ ತಮ್ಮ 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.
ಶುಕ್ರವಾರ, 26 ಜನವರಿ 2024
9:34 ಅಪರಾಹ್ನ
Daily PDF
ಚರಿತ್ರೆ ನಿರ್ಮಿಸಿದ ರೋಹನ್ ಬೋಪಣ್ಣ: ವಿಶ್ವದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟ ಕೊಡಗಿನ ಕುವರ
Authored by:
Yallamma G