➤ ಮಚಲಿಪಟ್ಟಣಂ' ನೌಕೆಯ ತಾಂತ್ರಿಕ ವೈಶಿಷ್ಟ್ಯಗಳು:
- ಆತ್ಮನಿರ್ಭರ ಭಾರತದ ಹೆಜ್ಜೆ: ಈ ಯುದ್ಧನೌಕೆಯನ್ನು ಶೇಕಡಾ 80 ಕ್ಕಿಂತ ಹೆಚ್ಚು ದೇಶೀಯ ಉಪಕರಣ ಹಾಗೂ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಇದು ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಕಲ್ಪನೆಗೆ ಬಲ ತಂದಿದೆ.
- ಸಾಗರ ಸೌಂಡ್ ಶೋಧ ತಂತ್ರಜ್ಞಾನ: ಆಳವಿಲ್ಲದ ಕರಾವಳಿ ನೀರಿನಲ್ಲಿ (Shallow Waters) ಸಡನ್ ಆಗಿ ಅಡಗಿಕೊಳ್ಳುವ ಶತ್ರು ಜಲಾಂತರ್ಗಾಮಿಗಳನ್ನು (Submarines) ಪತ್ತೆಹಚ್ಚಲು ಅತ್ಯಾಧುನಿಕ ಸೋನಾರ್ (Sonar) ವ್ಯವಸ್ಥೆಯನ್ನು ಹೊಂದಿವೆ.
- ಆಯುಧ ಹಾಗೂ ರಕ್ಷಣಾ ವ್ಯವಸ್ಥೆ: ಹಗುರವಾದ ಟಾರ್ಪಿಡೋಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳು ಮತ್ತು ಆಂಟಿ-ಸಬ್‌ಮರಿನ್ ಮೈನ್‌ಗಳನ್ನು (Mines) ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
- ವೇಗ ಮತ್ತು ಚಾಲನೆ: ಡೀಸೆಲ್ ಎಂಜಿನ್ ಹಾಗೂ ವಾಟರ್ ಜೆಟ್ ಪ್ರೊಪಲ್ಷನ್ ವ್ಯವಸ್ಥೆಯ ಮೂಲಕ ಅತ್ಯಂತ ವೇಗವಾಗಿ (25 ನಾಟ್ಸ್) ಕಾರ್ಯಾಚರಣೆ ನಡೆಸಬಲ್ಲದು.
- 8 ನೌಕೆಗಳು: ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ (GRSE), ಕೋಲ್ಕತ್ತಾ
- 8 ನೌಕೆಗಳು: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL), ಕೊಚ್ಚಿ