➤ UDISE+ : Unified District Information System for Education Plus (ಸಮಗ್ರ ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆ ಪ್ಲಸ್).
- ನಿರ್ವಹಣೆ: ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Department of School Education & Literacy).
- ಕಾರ್ಯ: ದೇಶಾದ್ಯಂತ ಇರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮೂಲಸೌಕರ್ಯ, ವಿದ್ಯಾರ್ಥಿಗಳ ದಾಖಲಾತಿ, ಶಿಕ್ಷಕರ ವಿವರ ಹಾಗೂ ಶೈಕ್ಷಣಿಕ ಸೂಚಕಗಳ ನೈಜ-ಸಮಯದ (Real-time) ದತ್ತಾಂಶವನ್ನು ಸಂಗ್ರಹಿಸಿ ವಿಶ್ಲೇಷಿಸುವುದು.
1. ಆಂಧ್ರಪ್ರದೇಶ (ಅತ್ಯಧಿಕ): 16,357
2. ಜಾರ್ಖಂಡ್: 9,827
3. ಮಹಾರಾಷ್ಟ್ರ: 9,269
4. ಕರ್ನಾಟಕ: 8,042
5. ಉತ್ತರ ಪ್ರದೇಶ: 7,874
6. ರಾಜಸ್ಥಾನ: 7,200
7. ಪಶ್ಚಿಮ ಬಂಗಾಳ: 6,769
➤ ವಿದ್ಯಾರ್ಥಿ-ಶಿಕ್ಷಕರ ಅನುಪಾತ: ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಮಟ್ಟದ ಸರಾಸರಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು (PTR) ಮಾನದಂಡಗಳ ವ್ಯಾಪ್ತಿಯಲ್ಲೇ ಇದೆ:
- ಪ್ರಾಥಮಿಕ ಶಾಲಾ ಹಂತ: 19 ವಿದ್ಯಾರ್ಥಿಗಳಿಗೆ 1 ಶಿಕ್ಷಕ (19:1)
- ಪ್ರೌಢಶಾಲಾ ಹಂತ: 15 ವಿದ್ಯಾರ್ಥಿಗಳಿಗೆ 1 ಶಿಕ್ಷಕ (15:1)
➤ ಏಕೋಪಾಧ್ಯಾಯ ಶಾಲೆಗಳಿಂದ ಉಂಟಾಗುವ ಪರಿಣಾಮಗಳು:
- ಶಿಕ್ಷಣದ ಗುಣಮಟ್ಟ ಕುಸಿತ: ಒಬ್ಬರೇ ಶಿಕ್ಷಕರು 1 ರಿಂದ 5 ನೇ ತರಗತಿವರೆಗಿನ ಎಲ್ಲಾ ವಿಷಯಗಳನ್ನು ಬೋಧಿಸುವುದು ಪ್ರಾಯೋಗಿಕವಾಗಿ ಕಷ್ಟಕರ.
- ಆಡಳಿತಾತ್ಮಕ ಒತ್ತಡ: ಬೋಧನೆಯ ಜೊತೆಗೆ ಬಿಸಿಯೂಟ ಯೋಜನೆ, ಶಾಲಾ ದಾಖಲಾತಿ, UDISE+ ಡೇಟಾ ಎಂಟ್ರಿ ಮುಂತಾದ ಆಡಳಿತಾತ್ಮಕ ಕಾರ್ಯಗಳಿಂದ ಶಿಕ್ಷಕರ ಮೇಲೆ ತೀವ್ರ ಒತ್ತಡ ಬೀಳುತ್ತದೆ.
- ಹಾಜರಾತಿ ಮತ್ತು ಗೈರುಹಾಜರಿ: ಶಿಕ್ಷಕರು ರಜೆ ಪಡೆದಾಗ ಅಥವಾ ತರಬೇತಿಗೆ ತೆರಳಿದಾಗ ಶಾಲೆಗೆ ರಜೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
- ವಿದ್ಯಾರ್ಥಿಗಳ ದಾಖಲಾತಿ ಕುಸಿತ: ಗುಣಮಟ್ಟದ ಬೋಧನೆ ಸಿಗದೆ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ, ಇದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ.