* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾಯಿಸಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ್ದು ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಸುವ ಯೋಜನೆ ಹೊಂದಿದೆ.
* ಈ ನಡುವೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್‌ಕಾಸ್ಕೋಸ್ ಲೂನಾ-25 ನೌಕೆಯೊಂದನ್ನು ಉಡಾಯಿಸಿದ್ದು ಚಂದ್ರನ ಮೇಲೆ ಇಳಿಸುವ ತವಕದಲ್ಲಿದೆ. ಹೀಗಾಗಿ, ಭೂಮಿಯ ಉಪಗ್ರಹ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವಲ್ಲಿ ಎರಡು ಬಾಹ್ಯಾಕಾಶ ನೌಕೆಗಳ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಂತಿದೆ.
* ಇಸ್ರೋ ನೌಕೆ ಚಂದ್ರಯಾನ-3 ಜುಲೈ 14ರಂದು ಉಡಾವಣೆಗೊಂಡಿದ್ದರೆ ರಾಸ್‌ಕಾಸ್ಮೋಸ್ `ಲೂನಾ-25 ಬಹುತೇಕ ಒಂದು ತಿಂಗಳ ನಂತರ, ಆಗಸ್ಟ್ 11ರಂದು ಗಗನಕ್ಕೆ ಏರಿದೆ . ಚಂದ್ರನ ದಕ್ಷಿಣ ಧ್ರುವ ತಲುಪುವುದು ಎರಡೂ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ಗುರಿಯಾಗಿದೆ.
ಯೋಜನೆಗಳು
* ಲೂನಾವನ್ನು ಚಂದ್ರನ ಮೇಲೆ ಒಂದು ವರ್ಷ ಕಾಲ ಪ್ರಯೋಗದಲ್ಲಿ ತೊಡಗಿಸುವಂತೆ ರಾಜ್ ಕಾಸ್ಕೋಸ್ ಯೋಜನೆ ರೂಪಿಸಿದೆ. ಲೂನಾದ ತೂಕ 1.8 ಟನ್ ಆಗಿದ್ದು 31 ಕೆಜಿಯಷ್ಟು (68 ಪೌಂಡ್) ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ದಿದೆ. ಇ-ಲಾಂಚ್ ವೆಹಿಕಲ್ ಮಾರ್ಕ್-3 ಎಂ4, ರಾಕೆಟ್ ಮೂಲಕ ಚಂದ್ರಯಾನ-3 ಉಡಾವಣೆಗೊಂಡಿದ್ದರೆ ಲೂನಾ-25 ಉಡಾವಣೆಗೆ ಸೋಯುಚ್-2 ಫೆಗಾಟ್ ಬೂಸ್ಟರ್ ಅನ್ನು ಬಳಸಲಾಗಿತ್ತು. ಚಂದ್ರನ ದಕ್ಷಿಣ ಧ್ರುವದ ರೆಗಾಲಿತ್ (ಗಟ್ಟಿಗೊಂಡಿಲ್ಲದ ಘನಪದಾರ್ಥ) ಮತ್ತು ಪ್ಲಾಸ್ಮಾ ಹಾಗೂ ಧೂಳಿನ ಕಣಗಳ ವೀಕ್ಷಣೆ ಲೂನಾದ ಉದ್ದೇಶವಾಗಿದೆ.
* ಲೂನಾ-25 ಚಂದ್ರನ ಮೇಲೆ ಇಳಿಯುವುದಕ್ಕೆ ಸಂಬಂಧಿಸಿ , ರಾಸ್‌ಕಾಸ್ಮೋಸ್ ಮಹತ್ವಾಕಾಂಕ್ಷೆಯ ವೇಳಾಪಟ್ಟಿ ರೂಪಿಸಿದೆ. ಉಡಾವಣೆಯಾದ ಐದು ದಿನದಲ್ಲಿ ಚಂದ್ರನ ಕಕ್ಷೆಯನ್ನು ತಲುಪುವುದು ಹಾಗೂ ಅಲ್ಲಿಂದ ಮತ್ತೆ ಐದರಿಂದ ಏಳು ದಿನದಲ್ಲಿ ಚಂದ್ರನ ಮೇಲೆ ಅದನ್ನು ಇಳಿಸುವುದು ರಷ್ಯಾದ ಯೋಜನೆಯಾಗಿದೆ.
* ಲೂನಾ ಆಗಸ್ಟ್ 5ರಂದು ಚಂದ್ರನನ್ನು ತಲುಪಿ ಕಕ್ಷೆಯನ್ನು ಪ್ರವೇಶಿಸಿ 21ರ ವೇಳೆಗೆ ಮೇ ಮೇಲೆ ಇಳಿಯಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.