* ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ 2023ರ​ ಫೈನಲ್​ ಪಂದ್ಯದಲ್ಲಿ ಭಾರತದ ಆರ್‌ ಪ್ರಜ್ಞಾನಂದ ವಿರುದ್ಧ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿಶ್ವಕಪ್ ಗೆದ್ದುಕೊಂಡಿದ್ದಾರೆ.
* 2023ರ ಚೆಸ್ ವಿಶ್ವಕಪ್ ನಲ್ಲಿ ವಿಶ್ವದ ನಂ.1 ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಭಾರತದ ಆರ್​. ಪ್ರಜ್ಞಾನಂದ ರನ್ನರ್​ಅಪ್​ ಆಗಿ ಹೊರಹೊಮ್ಮಿದರು. ಪಂದ್ಯಗಳು ಡ್ರಾ ಆಗಿದ್ದ ಕಾರಣ ಟೈ ಬ್ರೇಕ್ ಮೂಲಕ ವಿಜೇತರನ್ನು ನಿರ್ಧರಿಸಲಾಗಿದೆ.
* ಸದ್ಯ ರನ್ನರ್​ಅಪ್​ ಆಗಿ ಹೊರಹೊಮ್ಮಿರುವ ಭಾರತದ ಆರ್​. ಪ್ರಜ್ಞಾನಂದ ಅವರಿಗೆ 80 ಸಾವಿರ ಅಮೆರಿಕ ಡಾಲರ್ ಅಂದರೆ, ಅಂದಾಜು 66.13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ವಿಶ್ವಕಪ್ ಗೆದ್ದ ನಾರ್ವೆಯ ಮ್ಯಾಗ್ನಸ್​ ಕಾರ್ಲ್​ಸನ್ ಅವರು 110 ಸಾವಿರ ಡಾಲರ್​ (ಅಂದಾಜು​ 90.90 ಲಕ್ಷ ರೂಪಾಯಿ) ಪಡೆದುಕೊಂಡಿದ್ದಾರೆ.
*  ಚೆಸ್​ನಲ್ಲಿ ನಾನಿನ್ನೂ ಸಾಕಷ್ಟು ಸುಧಾರಣೆ ಕಾಣಬೇಕಿದೆ ಎಂದು ಗ್ರಾಂಡ್​​ ಮಾಸ್ಟರ್​​​​ ಪ್ರಜ್ಞಾನಂದ ತಮ್ಮನ್ನು ತಾವು ವಿಶ್ಲೇಷಣೆ ಮಾಡಿಕೊಂಡಿದ್ದಾರೆ.