* ಇಸ್ರೋ ಕಳುಹಿಸಿದ್ದ ಚಂದ್ರಯಾನ -3 ನೌಕೆಯು ಲ್ಯಾಂಡರ್ ಚಂದ್ರನ ದಕ್ಷಿಣ ದ್ರುವದ ಅಂಗಳದಲ್ಲಿ ಆಗಸ್ಟ್ 23 ರಂದು ಸಂಜೆ 6 ಗಂಟೆ 04 ನಿಮಿಷಕ್ಕೆ ಯಶಸ್ವಿಯಾಗಿ ತಲುಪಿದೆ.
* ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಹರಲಾಲ್ ನೆಹರೂ 1962ರಲ್ಲಿ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸಿದರು.
* ಭಾರತೀಯ ಸರಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿದ್ದ ಸಂಸ್ಥೆಯಲ್ಲಿ ಡಾ.ವಿಕ್ರಮ್ ಸಾರಾಭಾಯ್ ಅವರು ಮೊದಲ ಅಧ್ಯಕ್ಷರಾಗಿದ್ದು, 1969ರಲ್ಲಿ ಅದೇ ಸಂಸ್ಥೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಎಂದು ಮಾರ್ಪಟ್ಟಿತು.
* ಭಾರತೀಯ ಬಾಹ್ಯಾಕಾಶದ ಪಿತಾಮಹ ಎಂದೇ ಹೆಸರುವಾಸಿಯಾಗಿರುವ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು ಕೇರಳದ ತಿರುವನಂತಪುರಂನಲ್ಲಿ ವಿಕ್ರಂ ಸಾರಾಭಾಯ್ ಸ್ಪೇಸ್ ಸೆಂಟರ್ ಸ್ಥಾಪಿಸಲಾಗಿದೆ.
* ಇಸ್ರೋ ಸ್ಥಾಪನೆಯಾದಾಗಿಂದ 11 ಅಧ್ಯಕ್ಷರನ್ನು ಹೊಂದಿದ್ದು, ಪ್ರಸ್ತುತ ಎಸ್. ಸೋಮನಾಥ ಅವರು ISRO ಅಧ್ಯಕ್ಷರಾಗಿದ್ದಾರೆ.
* ವಿಶ್ವದ ಟಾಪ ಹತ್ತು ಬಾಹ್ಯಾಕಾಶಗಳಲ್ಲಿ ರಷ್ಯಾದ ಫೆಡರಲ್ ಸ್ಪೇಸ್ ಏಜೆನ್ಸಿ ಬಾಹ್ಯಾಕಾಶ ಪ್ರಥಮ ಸ್ಥಾನದಲ್ಲಿದ್ದರೆ. ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಎರಡನೇ ಸ್ಥಾನದಲ್ಲಿದೆ.
- ಕಾರ್ಯಸಾಧನೆಗಳು
* 1979ರಲ್ಲಿ ಭಾಸ್ಕರ-1, ಭೂಮಿಯ ವೀಕ್ಷಣೆಗೆ ಪ್ರಾಯೋಗಿಕ ಉಪಗ್ರಹ ಉಡಾವಣೆ.
* 1984ರಲ್ಲಿ ರಷ್ಯಾದ ರಾಕೆಟ್ ಸೋಯುಜ್ ಟಿ-11ರ ಮೂಲಕ ಬಾಹ್ಯಾಕಾಶಕ್ಕೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ.
* 2001 ರಲ್ಲಿ -1 ಉಪಗ್ರಹದೊಂದಿಗೆ ಭಾರಿ ರಾಕೆಟ್ ಜಿಯೊಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯಶಸ್ವಿ ಉಡಾವಣೆ.
* 2002ರಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಕಲ್ಪನಾ-1 ಉಪಗ್ರಹ ಉಡಾವಣೆ.
* 2008ರಲ್ಲಿ ಪಿಎಸ್‌ಎಲ್ ವಿಯಿಂದ ಇಸ್ರೇಲಿ ಉಪಗ್ರಹ ಟೆಕ್ಸಾರ್ ಉಡಾವಣೆ, ಒಂದೇ ಪಿಎಸ್‌ಎಲ್‌ವಿ ಮೂಲಕ ಎರಡು ಭಾರತೀಯ ಮತ್ತು ಎಂಟು ವಿದೇಶಿ ಉಪಗ್ರಹ ಸೇರಿ ಒಟ್ಟು 10 ಉಪಗ್ರಹಗಳ ಉಡಾವಣೆ.
* ಭಾರತದಿಂದ ಮೊದಲ ಬಾರಿ ಪಿಎಸ್‌ಎಲ್‌ವಿ ಮೂಲಕ ಚಂದ್ರಯಾನ-1 ಉಡಾವಣೆ, 2019ರಲ್ಲಿ ಏರಿಯಾನೆ, ಎಮಿಸ್ಯಾಟ್ ಮತ್ತು ರಿಸ್ಯಾಟ್ -2 ಬಿ, ಚಂದ್ರಯಾನ-2 ಯೋಜನೆಯನ್ನು ಇನ್ನೂ ಕೈಗೊಂಡಿದೆ. 2013ರಲ್ಲಿ ಮಂಗಳಯಾನ ಯೋಜನೆಯನ್ನೂ ಯಶಸ್ವಿಗೊಳಿಸಿದೆ.
* ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಶ್ರೀ ಹರಿಕೋಟಾದಿಂದ 87 ಭಾರತೀಯ 8 ವಿದ್ಯಾರ್ಥಿ ಉಪಗ್ರಹಗಳು (ವಿದ್ಯಾರ್ಥಿಗಳ ಸಂಶೋಧನಾ ಉಪಗ್ರಹಗಳು), 23 ವಿವಿಧ ದೇಶಗಳ 180 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Test Your Knowledge!
Attempt daily current affairs quizzes to boost your exam readiness.
Stay Updated with KPSC Vaani
Get instant notifications for exam alerts, question papers, syllabus, and results directly on your phone.