* ಭಾರತವು 2050ರ ವೇಳೆಗೆ 340 ಮಿಲಿಯನ್ ಹಿರಿಯ ನಾಗರಿಕರನ್ನು ಹೊಂದಲಿದೆ. ಇದು ವಿಶ್ವದ ವಯಸ್ಸಾದ ಜನಸಂಖ್ಯೆಯ ಸರಿಸುಮಾರು ಶೇ. 17ರಷ್ಟು ಇರಲಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್ ಇ (CBRE) ಸೌತ್ ಏಷ್ಯಾದ ವರದಿ ತಿಳಿಸಿದೆ.
* ಭಾರತದ ಹಿರಿಯ ಜನಸಂಖ್ಯೆಯು ಗಮನಾರ್ಹವಾಗಿ ಶೇ. 25.4 ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ ಎಂದು ಸಿಬಿಆರ್ ಇ ಯ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ಅವರು ತಿಳಿಸಿದ್ದಾರೆ.
* ದೇಶದಲ್ಲಿ ಪ್ರಸ್ತುತ ಹಿರಿಯರ ಆರೈಕೆ ಕೇಂದ್ರಗಳು ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ದೇಶ್ಯದಾದ್ಯಂತ ಹಿರಿಯರ ಆರೈಕೆ ಕೇಂದ್ರಗಳು 18,000 ಘಟಕಗಳಿದ್ದು, ಸಂಘಟಿತ ಹಿರಿಯ ಜೀವನ ಮತ್ತು ಆರೈಕೆ ವಿಭಾಗಗಳಲ್ಲಿ ಶೇ. 62ರಷ್ಟನ್ನು ಹೊಂದಿರುವ ದಕ್ಷಿಣ ಪ್ರದೇಶದಲ್ಲೇ ಇದು ಹೆಚ್ಚಾಗಿದೆ.
ಶುಕ್ರವಾರ, 19 ಎಪ್ರಿಲ್ 2024
4:25 ಅಪರಾಹ್ನ
Daily PDF
CBRE ವರದಿ : 2050 ರ ವೇಳೆಗೆ ವಿಶ್ವದ 17 ರಷ್ಟು ಹಿರಿಯ ಜನಸಂಖ್ಯೆಯು ಭಾರತದಲ್ಲಿರುತ್ತದೆ
Authored by:
Yallamma G