* ಇದೇ ಮೊದಲ ಬಾರಿಗೆ ಭಾರತದ ನಟಿಯೊಬ್ಬರು ಪ್ರತಿಷ್ಠಿತ ಕ್ಯಾನಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 77ನೇ ಕ್ಯಾನಸ್ ಫಿಲಂ ಫೆಸ್ಟಿವಲ್‌ನಲ್ಲಿ ನಟಿ ಅನಸೂಯಾ ಸೇನ್‌ಗುಪ್ತಾ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನ್-ಸಾರ್ಟನ್ ರಿಗಾರ್ಡ್ ವಿಭಾಗದಲ್ಲಿ ಅನಸೂಯಾ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
* ಲೈಂಗಿಕ ಕಾರ್ಯಕರ್ತೆಯರ ಬದುಕು, ಲೆಸ್ಬಿಯನ್ ಗಳ ಬದುಕು - ಹೋರಾಟ ಉಳಿವಿನ ಕಥಾ ಹಂದರ ಹೊಂದಿರುವ ಸಿನಿಮಾ “ದ ಶೇಮ್‌ಲೆಸ್’' ಗಾಗಿ ಸೇನ್‌ಗುಪ್ತಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಪಾಮ್ ಡಿ'ಓರ್ ನಂತರ ಎರಡನೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ.
* “ದ ಶೇಮ್‌ಲೆಸ್’' ಚಿತ್ರವನ್ನು ಬಲ್ಗೇರಿಯಾದ ನಿರ್ದೇಶಕ ಕೋಂ ಸ್ಟಂಟಿನ್ ಬೋಜನೋವ್ ಅವರು ನಿರ್ದೇಶಿಸಿದ್ದಾರೆ.
* 77 ನೇ ಕ್ಯಾನೆಸ್ ಚಿತ್ರೋತ್ಸವದಲ್ಲಿ ಮೈಸೂರಿನ ಚಲನಚಿತ್ರ ನಿರ್ಮಾಪಕ ಚಿದಾನಂದ ಎಸ್ ನಾಯ್ಕ್ ಅವರ 'ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ' ಚಿತ್ರಕ್ಕೆ ಕ್ಯಾನೆಸ್ ಲಾ ಸಿನೆಫ್‌ನ ಮೊದಲ ಬಹುಮಾನವನ್ನು ಪಡೆದುಕೊಂಡಿದೆ.
* ಫ್ರಾನ್ಸ್‌ನ ಕೇನ್ಸ್ನಲ್ಲಿ ನಡೆಯುವ ಚಲನಚಿತ್ರೋತ್ಸವ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.
ಸೋಮವಾರ, 27 ಮೇ 2024
12:45 ಅಪರಾಹ್ನ
Daily PDF
Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್ ಪ್ರಶಸ್ತಿ ಗೌರವ
Authored by:
Yallamma G