➤ ಭಾರತದ ಕಡಲ ವ್ಯಾಪಾರ ಕ್ಷೇತ್ರವನ್ನು (Maritime Trade) ಸ್ವಾವಲಂಬನೆ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ದೇಶದಲ್ಲೇ ಶಿಪ್ಪಿಂಗ್ ಕಂಟೈನರ್ಗಳ (Shipping Containers) ಉತ್ಪಾದನೆಯನ್ನು ಉತ್ತೇಜಿಸಲು ₹10,000 ಕೋಟಿ ವೆಚ್ಚದ 'ಕಂಟೈನರ್ ಉತ್ಪಾದನಾ ಉತ್ತೇಜಕ ಯೋಜನೆ'ಗೆ (Container Manufacturing Promotion Scheme - CMPS) ಅನುಮೋದನೆ ನೀಡಲಾಗಿದೆ.
➤ ಯೋಜನೆಯ ಹಿನ್ನೆಲೆ ಮತ್ತು ಪ್ರಮುಖ ಉದ್ದೇಶಗಳು: ಭಾರತದ ಅಂತರರಾಷ್ಟ್ರೀಯ ಸರಕು ಸಾಗಣೆಯು (Merchandise Trade) ಬಹುಪಾಲು ಕಡಲ ಮಾರ್ಗವನ್ನೇ ಅವಲಂಬಿಸಿದೆ. ಆದರೆ, ಭಾರತೀಯ ವಾಣಿಜ್ಯ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಕಂಟೈನರ್ಗಳ ದೊಡ್ಡ ಕೊರತೆಯಿದೆ. ಪ್ರಸ್ತುತ ಭಾರತದ ವ್ಯಾಪಾರಕ್ಕೆ ಅಗತ್ಯವಿರುವ ಹೆಚ್ಚಿನ ಕಂಟೈನರ್ಗಳು ವಿದೇಶಗಳಿಂದ (ವಿಶೇಷವಾಗಿ ಚೀನಾದಿಂದ) ಆಮದಾಗುತ್ತಿವೆ.
ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗುವ ವ್ಯತ್ಯಯಗಳು ಮತ್ತು ಬೆಲೆ ಏರಿಕೆಯ ಬಿಕ್ಕಟ್ಟಿನಿಂದ ಭಾರತೀಯ ರಫ್ತುದಾರರನ್ನು ರಕ್ಷಿಸಲು ಈ ಸ್ವಾವಲಂಬನಾ ಯೋಜನೆ ರೂಪಿಸಲಾಗಿದೆ.
- ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಪ್ರಸ್ತುತ ವರ್ಷಕ್ಕೆ ಸುಮಾರು 70,000 ಟೀಯುಗಳಷ್ಟ (TEUs - Twenty-foot Equivalent Units) ಇರುವ ದೇಶಿ ಕಂಟೈನರ್ ಉತ್ಪಾದನಾ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಸುಮಾರು 7.5 ಲಕ್ಷ TEUಗಳಿಗೆ (ಹತ್ತು ಪಟ್ಟು) ಹೆಚ್ಚಿಸುವ ಗುರಿ ಹೊಂದಲಾಗಿದೆ.
- ಆಮದು ಅವಲಂಬನೆ ಕಡಿತ: ವಿದೇಶಿ ಕಂಟೈನರ್ಗಳ ಮೇಲೆ ಕೇವಲ ಆಮದು ಮಾಡಿಕೊಳ್ಳುವುದನ್ನು ತಗ್ಗಿಸಿ, ದೇಶದಲ್ಲೇ ಜಾಗತಿಕ ಗುಣಮಟ್ಟದ ಕಂಟೈನರ್ ತಯಾರಿಸುವುದು.
➤ ₹10,000 ಕೋಟಿ ಅನುದಾನದ ವಿಭಜನೆ ಮತ್ತು ಆರ್ಥಿಕ ಸಹಾಯ: ಈ ಯೋಜನೆಯು 2039-40ರ ಹಣಕಾಸು ವರ್ಷದವರೆಗೆ ಚಾಲ್ತಿಯಲ್ಲಿರಲಿದ್ದು, ಹಣಕಾಸಿನ ನೆರವನ್ನು ಪ್ರಮುಖವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ:
1. ಕಾರ್ಯಾಚರಣಾ ವೆಚ್ಚದ ನೆರವು (Operational Expenditure Assistance - ₹8,891 ಕೋಟಿ): ಯೋಜನೆಯ ಅತಿ ದೊಡ್ಡ ಮೊತ್ತ ಇದಾಗಿದೆ. ಜಾಗತಿಕ ಶಿಪ್ಪಿಂಗ್ ಮಾನದಂಡಗಳಿಯನ್ವಯ ದೇಶದಲ್ಲೇ ಕಂಟೈನರ್ ಉತ್ಪಾದಿಸಿ ಮಾರಾಟ ಮಾಡುವ ಅರ್ಹ ತಯಾರಕರಿಗೆ ಪ್ರತಿ ಕಂಟೈನರ್ಗೆ ನೇರ ಆರ್ಥಿಕ ಬೆಂಬಲ ಸಿಗಲಿದೆ. ಇದರಡಿ:
- ಪ್ರಮಾಣಿತ 20-ಅಡಿಯ ಕಂಟೈನರ್ಗೆ ₹49,500 ಸಹಾಯಧನ.
- 40-ಅಡಿಯ ಕಂಟೈನರ್ಗೆ ₹86,625 ವರೆಗೆ ಆರ್ಥಿಕ ನೆರವು ದೊರೆಯಲಿದೆ.
2. ಬಡ್ಡಿ ಸಬ್ಸಿಡಿ ನೆರವು (Interest Subvention Assistance - ₹859 ಕೋಟಿ): ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅಥವಾ ವಿಸ್ತರಿಸಲು ಪಡೆಯುವ ಅವಧಿ ಸಾಲಗಳ ಮೇಲೆ ವಾರ್ಷಿಕ ಶೇ. 3ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುತ್ತದೆ.
3. ಪರೀಕ್ಷೆ ಮತ್ತು ಪ್ರಮಾಣೀಕರಣ ಸೌಲಭ್ಯ (Testing and Certification - ₹150 ಕೋಟಿ): ಕಂಟೈನರ್ಗಳು ಅಂತರರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಡೈನಾಮಿಕ್ longitudinal impact ಟೆಸ್ಟಿಂಗ್ ಸೇರಿದಂತೆ ಸಾಮಾನ್ಯ ಪರೀಕ್ಷಾ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಮೀಸಲಿಡಲಾಗಿದೆ.
4. ಯೋಜನಾ ನಿರ್ವಹಣೆ ಮತ್ತು ಇತರ ವೆಚ್ಚಗಳು: ಆಡಳಿತಾತ್ಮಕ ಮೇಲ್ವಿಚಾರಣೆ ಹಾಗೂ ಪ್ರಮುಖ ಬಂದರುಗಳಲ್ಲಿ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡುವ ಸೌಲಭ್ಯಗಳನ್ನು ಒಳಗೊಂಡಿದೆ.
➤ ಸ್ಥಳೀಯ ವಸ್ತುಗಳ ಬಳಕೆಗೆ ಒತ್ತು (Domestic Content Requirement): ಭಾರತದಲ್ಲೇ ಉತ್ಪಾದನೆ ಮೇಲ್ಮಟ್ಟಕ್ಕೇರಲು ಹಾಗೂ ಉದ್ಯಮಕ್ಕೆ ಬಲ ತುಂಬಲು ಸ್ಥಳೀಯ ಕಚ್ಚಾ ಸಾಮಗ್ರಿಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ:
- ಆರಂಭಿಕ ವರ್ಷಗಳಲ್ಲಿ ಶೇ. 70ರಷ್ಟಿದ್ದ ಸ್ಥಳೀಯ ಕಂಟೆಂಟ್ ಅವಶ್ಯಕತೆಯನ್ನು, ಮುಂದಿನ ವರ್ಷಗಳಲ್ಲಿ ಶೇ. 90ಕ್ಕೆ ಹೆಚ್ಚಿಸಬೇಕಾಗುತ್ತದೆ.
- ಇದು ಕಾರ್ನರ್ castings (ಮೂಲೆ ಜೋಡಣೆಗಳು), ವಿಶೇಷ ಉಕ್ಕು, ಮರದ ಚೌಕಟ್ಟುಗಳು ಮತ್ತು ಬಣ್ಣಗಳಂತಹ (Paints) ಸ್ಥಳೀಯ ಪೋಷಕ ಕೈಗಾರಿಕೆಗಳಿಗೂ ಭಾರಿ ಬೇಡಿಕೆ ಸೃಷ್ಟಿಸಲಿದೆ.
➤ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಲಾಭಗಳು
- ಉದ್ಯೋಗಾವಕಾಶಗಳು: ಈ ಉಪಕ್ರಮದಿಂದ ಸುಮಾರು 3,000 ನೇರ ಉದ್ಯೋಗಗಳು ಹಾಗೂ 50,000ಕ್ಕೂ ಅಧಿಕ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
- ಆರ್ಥಿಕ ಪ್ರಗತಿ: 2039-40ರ ವೇಳೆಗೆ ಈ ಯೋಜನೆಯು ಸುಮಾರು ₹75,000 ಕೋಟಿ ಮೌಲ್ಯದ ಆರ್ಥಿಕ ಉತ್ಪಾದನೆಯನ್ನು ಸೃಷ್ಟಿಸುವ ಅಂದಾಜಿದೆ.
- ದೊಡ್ಡ ಪ್ರಮಾಣದ ಬೇಡಿಕೆ: ಭಾರತ ಸರ್ಕಾರದ 'ಮ್ಯಾರೇಟೈಮ್ ಅಮೃತ ಕಾಲ ದೃಷ್ಟಿಕೋನ' (Maritime Amrit Kaal Vision), ಹೊಸ ವದಾವನ್ (Vadhavan) ಮತ್ತು ಗಲತೇಬೇ (Galathea Bay) ಮೆಗಾ ಬಂದರುಗಳ ನಿರ್ಮಾಣ ಹಾಗೂ ಭರತ್ ಕಂಟೈನರ್ ಶಿಪ್ಪಿಂಗ್ ಲೈನ್ಸ್ಗಳ ವಿಸ್ತರಣೆಯಿಂದ ದೇಶದಲ್ಲಿ ಕಂಟೈನರ್ಗಳ ಬೇಡಿಕೆ ವಿಪರೀತ ಹೆಚ್ಚಾಗಲಿದ್ದು, ಈ ಯೋಜನೆ ಅದಕ್ಕೆ ಸರಿಯಾಗಿಾ ಸ್ಪಂದಿಸಲಿದೆ.
ಭಾರತದಲ್ಲಿ ಕಂಟೈನರ್ ಉತ್ಪಾದನೆಗೆ ₹10,000 ಕೋಟಿ ಮೊತ್ತದ ಬೃಹತ್ ಯೋಜನೆ: ಕಡಲ ವ್ಯಾಪಾರ ಮತ್ತು ಆಮದು ತಗ್ಗಿಸಲು ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ
Published by Akshata Halli
1 hour ago