* ಭಾರತದ ಅನುದಾನದೊಂದಿಗೆ ಭೂತಾನ್ ನ ಥಿಂಪುವಿನಲ್ಲಿ ನಿರ್ಮಿಸಲಾಗಿರುವ ಗ್ಯಾಲ್ಟ್‌ಸುನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಮಾರ್ಚ್ 23 ರಂದು ಬೆಳ್ಳಿಗೆ ಭೂತಾನ್ ಪ್ರಧಾನಿ ಭೂತಾನ್‌ನ ದಾಶೋ ಶೆರಿಂಗ್ ಟೊಬ್ಗೆ ಅವರೊಂದಿಗೆ ಲೋಕಾರ್ಪಣೆ ಮಾಡಿದರು.
* ಉದ್ಘಾಟನೆ ವೇಳೆ ಮಾಡನಾಡಿದ ಶೆರಿಂಗ್ ಟೊಬ್ಗೆ ಅವರು ಅತ್ಯಾಧುನಿಕ ಆಸ್ಪತ್ರೆಯ ನಿರ್ಮಾಣಕ್ಕೆ ಸಂಪೂರ್ಣ ಧನಸಹಾಯ ನೀಡಿದ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
* ಪ್ರಧಾನಿ ಮೋದಿ ಭೂತಾನ್ ಭೇಟಿ ಸಂದರ್ಭದಲ್ಲಿ ಭೂತಾನ್‌ನ 13 ನೇ ಪಂಚವಾರ್ಷಿಕ ಯೋಜನೆಗೆ 10,000 ಕೋಟಿಗಳ ಗಣನೀಯ ನೆರವು ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಇದು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
* ಭೂತಾನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು "ಸ್ನೇಹಿತ ಮತ್ತು ಹಿರಿಯ ಸಹೋದರ" ಎಂದು ಟೊಬ್ಗೆ ಶ್ಲಾಘಿಸಿದ್ದಾರೆ. ಇದರೊಂದಿಗೆ ಎರಡು ದಿನಗಳ ಭೂತಾನ್ ಪ್ರವಾಸವನ್ನು ಯಶಸ್ವಿಗೊಳಿಸಿದ ಪ್ರಧಾನಿ ಮೋದಿ ಮರಳಿ ಥಿಂಪುವಿನಿಂದ ಭಾರತಕ್ಕೆ ಹೊರಟರು.
* ಇಂಧನ, ವ್ಯಾಪಾರ, ಡಿಜಿಟಲ್ ಸಂಪರ್ಕ, ಬಾಹ್ಯಾಕಾಶ ಮತ್ತು ಕೃಷಿ ವಲಯದಲ್ಲಿ ಸಹಕಾರ ಸೇರಿ ಹಲವು ಒಪ್ಪಂದಗಳಿಗೆ ಭಾರತ ಮತ್ತು ಭೂತಾನ್ ಸಹಿ ಹಾಕಿವೆ.
* ಉಭಯ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಯ ಒಡಂಬಡಿಕೆಯನ್ನೂ (ಎಂಒಯು) ಅಂತಿಮಗೊಳಿಸಲಾಗಿದೆ. ದೇಶದ 'ನೆರೆಹೊರೆ ಮೊದಲು' ನೀತಿಯ ಭಾಗವಾಗಿ ಹಿಮಾಲಯದ ರಾಷ್ಟ್ರದೊಂದಿಗಿನ ಭಾರತದ ಅನನ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಧಾನಿ ಮೋದಿ ಭೂತಾನ್‌ಗೆ ಎರಡು ದಿನಗಳ ಭೇಟಿ ನೀಡಿದ್ದಾರೆ.
* ಪ್ರಧಾನಿ ಮೋದಿ ಮತ್ತು ಭೂತಾನ್ ಪ್ರಧಾನಿ ಶೆರಿಂಗ್ ಟೊಬ್ಬೆ ಅವರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಭೇಟಿ ವೇಳೆ ಪ್ರಧಾನಿ ಮೋದಿ ಅವರಿಗೆ ಭೂತಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಲೊ' ನೀಡಿ ಗೌರವಿಸಿದೆ.
ಭೂತಾನ್ ನಲ್ಲಿ ಭಾರತ ಅನುದಾನಿತ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ ಮೋದಿ
Published by Yallamma G
24 ಮಾರ್ಚ್ 2024