* ಭಾರತಕ್ಕೆ ಹೊಸ ರಾಯಭಾರಿಯಾಗಿ ರುವೆನ್ ಅಜರ್ ನೇಮಕಕ್ಕೆ ಇಸ್ರೇಲ್ ಸರ್ಕಾರ ಅನುಮೋದನೆ ನೀಡಿದೆ. ಅಜರ್ ಅವರು ಶ್ರೀಲಂಕಾ ಮತ್ತು ಭೂತಾನ್‍ಗೆ ಅನಿವಾಸಿ ರಾಯಭಾರಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
* ಅಜರ್ ಪ್ರಸ್ತುತ ರೊಮೇನಿಯಾದಲ್ಲಿ ಇಸ್ರೇಲ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
* ಅಜರ್ ಅವರು 2010 ರಿಂದ 2012 ರವರೆಗೆ ಅಮ್ಮನ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2012 ರಿಂದ 2014 ರವರೆಗೆ ಇಸ್ರೇಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಮಧ್ಯಪ್ರಾಚ್ಯ ಸಂಶೋಧನೆಯ ಮುಖ್ಯಸ್ಥರಾಗಿ ಮತ್ತು 2014 ರಿಂದ 2018 ರವರೆಗೆ, ಅಜರ್ ವಾಷಿಂಗ್ಟನ್, DC ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಉಪ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
* 2021 ರಿಂದ ಭಾರತದಲ್ಲಿ ಇಸ್ರೇಲಿ ರಾಯಭಾರಿಯಾಗಿ ನೌರ್ ಗಿಲೋನ್ ಅವರು ಸೇವೆ ಸಲ್ಲಿಸುತ್ತಿದರು ಈಗ ಅವರ ಸ್ಥಾನಕ್ಕೆ ಅಜರ್ ನೇಮಕಗೊಳ್ಳಲಿದ್ದಾರೆ.
* ಅಜರ್ ಅವರು ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಇಸ್ರೇಲ್-ಯುಎಸ್-ಚೀನಾ ಆಂತರಿಕ ಕಾರ್ಯಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ, ಮೂರು ವರ್ಷಗಳ ಕಾಲ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ವಿದೇಶಾಂಗ ನೀತಿಯ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು ಪ್ರಧಾನ ಮಂತ್ರಿಯ ವಿದೇಶಾಂಗ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಮಂಗಳವಾರ, 19 ಡಿಸೆಂಬರ್ 2023
10:04 ಪೂರ್ವಾಹ್ನ
Daily PDF
ಭಾರತಕ್ಕೆ ಹೊಸ ರಾಯಭಾರಿಯಾಗಿ ರುವೆನ್ ಅಜರ್ ನೇಮಕ
Authored by:
Yallamma G