* ಹೊಸ ತಲೆಮಾರಿನ ತಂತ್ರಜ್ಞಾನ ಹೊಂದಿದ ಏರ್ ಬಸ್ ಡಿಫೆನ್ಸ್ - ಸ್ಪೇಸ್ ಕಂಪನಿ ನಿರ್ಮಿಸಿರುವ ಸಿ295 ಸರಕು ಸಾಗಣೆ ವಿಮಾನ ವನ್ನು ಭಾರತೀಯ ವಾಯುಪಡೆಗೆ ಸೆಪ್ಟೆಂಬರ್ 25 ರಂದು ಸೇರ್ಪಡೆಮಾಡಲಾಯಿತು.
* ಉತ್ತರ ಪ್ರದೇಶದ ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಭಾರತ್ ಡ್ರೋನ್ ಶಕ್ತಿ -2023 ಪ್ರದರ್ಶನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 25 ರಂದು ಉದ್ಘಾಟಿಸಿ ವಾಯುಪಡೆಗೆ ಸರಕು ವಿಮಾನವನ್ನು ಹಸ್ತಾಂತರಿಸಿದರು.
* ಏರ್ ಬಸ್ ಡಿಫೆನ್ಸ್ - ಸ್ಪೇಸ್ ಕಂಪನಿಯೊಂದಿಗೆ ಮಿಲಿಟರಿ ಸರಕು ಸಾಗಣೆ ಯ 56 ವಿಮಾನಗಳನ್ನು ಸುಮಾರು 22,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲು 2021 ರ ಸೆಪ್ಟೆಂಬರ್‌ನಲ್ಲಿ ರಕ್ಷಣಾ ಸಚಿವಾಲಯವು ಒಪ್ಪಂದ ಮಾಡಿಕೊಂಡಿತ್ತು.
* ಯುರೋಪ್ ನ ಏರ್‌ಬಸ್ ಸಂಸ್ಥೆಯು 2025 ರ ವೇಳೆಗೆ ಫ್ಲೈ-ಅವೇ ಸ್ಥಿತಿಯಲ್ಲಿ ಮೊದಲ 16 ವಿಮಾನಗಳನ್ನು ಪೂರೈಸಲಿದ್ದು, ಮತ್ತು 40 ವಿಮಾನಗಳನ್ನು ಎರಡು ಕಂಪನಿಗಳ ನಡುವಿನ ಭಾರತದಲ್ಲಿ ಕೈಗಾರಿಕಾ ಪಾಲುದಾರಿಕೆಯ ಭಾಗವಾಗಿ ವಡೋದರದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ತಯಾರಿಸುತ್ತದೆ.
- ಸಿ 295 ಸರಕು ಸಾಗಾಣೆ ವಿಮಾನ ವಿಶೇಷತೆಗಳು:
* ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶಕ್ಕೆ ಬಳಕೆ
* ವಿಶೇಷ ಕಾರ್ಯಾಚರಣೆ, ಕಡಲ ಗಸ್ತು ಕರ್ತವ್ಯ ನಿರ್ವಹಣೆ
* ಅಧಿಕ ತೂಕದ ವಿಮಾನಗಳು ಸುಲಭವಾಗಿ ತೆರಳಲು ಆಗದ ಸ್ಥಳಗಳಿಗೂ ಸಾಗಣೆಗೆ ಅನುಕೂಲಕರ
* 9 ಟನ್ ಭಾರ ಹೊರುವ ಸಾಮರ್ಥ್ಯ
* 71 ತುಕಡಿ ಅಥವಾ 50 ಅರೆಸೇನಾ ತುಕಡಿ ಕರೆದೊಯ್ಯಬಹುದು
ಮಂಗಳವಾರ, 26 ಸೆಪ್ಟೆಂಬರ್ 2023
1:24 ಅಪರಾಹ್ನ
Daily PDF
ಭಾರತೀಯ ವಾಯುಪಡೆಗೆ ಸಿ295 ಸರಕು ಸಾಗಣೆ ವಿಮಾನ ಸೇರ್ಪಡೆ
Authored by:
Bhagya R K