* 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಸ್ವರ್ಣ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
* ಸೆಪ್ಟೆಂಬರ್ 25 ಸೋಮವಾರ ರಂದು ಶೂಟಿಂಗ್‌ನಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಹಾಗೂ ಹರ್ಮಾನ್‌ಪ್ರೀತ್ ಕೌರ್ ನಾಯಕತ್ವದ ಮಹಿಳಾ ಕ್ರಿಕೆಟ್‌ನಲ್ಲಿ ಮೊದಲ ಚಿನ್ನದ ಪದಕ ಪಡೆದುಕೊಂಡರು.
* ಶೂಟಿಂಗ್‌ನಲ್ಲಿ ಮತ್ತೆರಡು ಕಂಚು ಹಾಗೂ ರೋಯಿಂಗ್ ನಲ್ಲೂ ಎರಡು ಕಂಚುಗಳನ್ನು ಪಡೆದುಕೊಂಡಿತು.
* ಒಟ್ಟಾರೆಯಾಗಿ ಭಾರತವು ಕ್ರೀಡಾಕೂಟದಲ್ಲಿ ಇದುವರೆಗೆ ಗೆದ್ದ ಒಟ್ಟು ಪದಕಗಳ ಸಂಖ್ಯೆ 11ಕ್ಕೆ (2 ಚಿನ್ನ, 3 ಬೆಳ್ಳಿ, 6 ಕಂಚು) ಏರಿಕೆಯಾಗಿದೆ.
* ಶೂಟಿಂಗ್‌ನಲ್ಲಿ ದಿವ್ಯಾಂಶ್ ಸಿಂಗ್ ಪನ್ದರ್, ರುದ್ರಾಂಕ್ ಪಾಟೀಲ್, ಐಶ್ವರಿ ಪ್ರತಾಪ್ ಸಿಂಗ್ ಥೋಮರ್ ಪುರುಷರ 10 ಮೀ. ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತಕ್ಕೆ ಕ್ರೀಡಾಕೂಟದ ಮೊದಲ ಸ್ವರ್ಣ ಪದಕ ಗೆದ್ದುಕೊಟ್ಟರು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಡಬಲ್ ಸ್ವರ್ಣ ಸಂಭ್ರಮ
Published by Bhagya R K
26 ಸೆಪ್ಟೆಂಬರ್ 2023