* ಫೆಡ್ಎಕ್ಸ್ ಕಂಪನಿ ಸಿಇಒ, ಭಾರತೀಯ ಮೂಲದ ಅಮೆರಿಕ ಉದ್ಯಮಿ ರಾಜ್ ಸುಬ್ರಹ್ಮಣಿಯಮ್ಗೆ (55) ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗಿದೆ.
* ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯು ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯಾಗಿದ್ದು ಈ ಸಾಲಿನ ಪ್ರಶಸ್ತಿಯು ರಾಜ್ ಸುಬ್ರಹ್ಮಣಿಯಮ್ಗೆ ನೀಡಲಾಗಿದ್ದು, ಸುಬ್ರಮಣ್ಯಂ ಅವರು 2020 ರಲ್ಲಿ ಫೆಡ್ಎಕ್ಸ್ ನಿರ್ದೇಶಕರ ಮಂಡಳಿಗೆ ಆಯ್ಕೆಯಾದರು.
* ಕೆನಡಾದಲ್ಲಿ ಫೆಡ್ಎಕ್ಸ್ ಎಕ್ಸ್ಪ್ರೆಸ್ನ ಅಧ್ಯಕ್ಷರಾಗಿ ಮತ್ತು ಏಷ್ಯಾ ಮತ್ತು ಯುಎಸ್ನಾದ್ಯಂತ ಹಲವಾರು ಇತರ ನಿರ್ವಹಣೆ ಮತ್ತು ಮಾರ್ಕೆಟಿಂಗ್ ಪಾತ್ರಗಳಲ್ಲಿ ಅವರು 1991 ರಲ್ಲಿ ಫೆಡ್ಎಕ್ಸ್ಗೆ ಸೇರಿದಾಗಿನಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಭಾರತೀಯ ಮೂಲದ ಅಮೆರಿಕ ಉದ್ಯಮಿ ರಾಜ್ ರವರಿಗೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ
Published by Yallamma G
17 ಏಪ್ರಿಲ್ 2023