* ಭಾರತದ ಷಟ್ಲರ್‌ ಲಕ್ಷ್ಯ ಸೇನ್​ ಅವರು ಕೆನಡಾ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಜಯಿಸಿದ್ದರು.
* ಜುಲೈ 09 ರಂದು (ಭಾನುವಾರ) ಕ್ಯಾಲ್ಗರಿಯಲ್ಲಿ ನಡೆದ ಪುರುಷರ ಸಿಂಗಲ್ಸ್​​ ಫೈನಲ್​ನಲ್ಲಿ 21-18, 22-20 ನೇರ ಸೆಟ್‌ಗಳಿಂದ ವಿಶ್ವದ 10ನೇ ಶ್ರೇಯಾಂಕದ ಚೀನಾ ಆಟಗಾರ ಲಿ ಶಿ ಫೆಂಗ್ ಅವರ ವಿರುದ್ಧ ಲಕ್ಷ್ಯ ಸೇನ್​ ಅವರು ವಿಜೇತರಾದರು.
* ಕೆನಡಾ ಓಪನ್ ಟೂರ್ನಿಯ ಫೈನಲ್‌ನಲ್ಲಿ ಗೆಲುವು ಸಾಧಿಸಿರುವ ಯುವ ಭಾರತೀಯ ಆಟಗಾರ ಲಕ್ಷ್ಯ ಸೇನ್ ಅವರು BWF ವರ್ಲ್ಡ್ ಟೂರ್ನಿನಲ್ಲಿ ಎರಡನೇ ಟೈಟಲನ್ನು ಮುಡಿಗೇರಿಸಿಕೊಂಡಿದ್ದಾರೆ.
* ಈ ಟೂರ್ನಮೆಂಟ್‌ನಲ್ಲಿ ಲಕ್ಷ್ಯ ಸೇನ್ ಗೆಲುವು ಅವರ ಎರಡನೇ BWF ವರ್ಲ್ಡ್ ಟೂರ್ ಪ್ರಶಸ್ತಿ ಎನಿಸಿಕೊಂಡಿದೆ.