* ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇತ್ತೀಚೆಗೆ ಐದನೇ ಲೀಡ್ (ವಿವಿಧ ರಾಜ್ಯಗಳ ಲಾಜಿಸ್ಟಿಕ್ಸ್) -2023 ರ ವರದಿಯನ್ನು ಬಿಡುಗಡೆ ಮಾಡಿದೆ.
* ಈ ವರದಿಯು ಭಾರತದದಲ್ಲಿನ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆಯ ಮೇಲೆ ಬೆಳಕು ಚೆಲ್ಲುತ್ತದೆ.
* ಲಾಜಿಸ್ಟಿಕ್ಸ್ ಇಂಡೆಕ್ಸ್ ಚಾರ್ಟ್‌ನಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಚಂಡೀಗಢ ಹಾಗೂ ಗುಜರಾತ್ ರಾಜ್ಯಗಳು ಮುಂದಿವೆ. ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳಿಗೆ ರೈಸಿಂಗ್ ಸ್ಟಾರ್ಸ್ ಸ್ಥಾನ ಸಿಕ್ಕಿದೆ.
* ಲಾಜಿಸ್ಟಿಕ್ಸ್ ವಲಯದಲ್ಲಿ ದಿಲ್ಲಿ, ಅಸ್ಸಾಂ, ಹರಿಯಾಣ, ಪಂಜಾಬ್, ತೆಲಂಗಾಣ ಹಾಗೂ ಉತ್ತರಪ್ರದೇಶಗಳು ತಮ್ಮ ಸಾಧಕ ಸ್ಥಾನಮಾನವನ್ನು ಉಳಿಸಿಕೊಂಡಿವೆ. ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಅರುಣಾ ಚಲಪ್ರದೇಶ, ನಾಗಾಲ್ಯಾಂಡ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಅತಿವೇಗವಾಗಿ ಈ ವಲಯದಲ್ಲಿ ಪ್ರಗತಿ ಸಾಧಿಸುತ್ತಿವೆ.
* 2047ರ ವೇಳೆಗೆ ಭಾರತೀಯ ಆರ್ಥಿಕತೆಯನ್ನು 35 ಟ್ರಿಲಿಯನ್ ಡಾಲರ್‌ಗೆ ಏರಿಸುವಲ್ಲಿ ಲಾಜಿಸ್ಟಿಕ್ಸ್ ವಲಯ ಪ್ರಮುಖ ಪಾತ್ರವಹಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.
ಬುಧವಾರ, 20 ಡಿಸೆಂಬರ್ 2023
4:56 ಅಪರಾಹ್ನ
Daily PDF
ಭಾರತ ದೇಶದ ಆರ್ಥಿಕ ಪ್ರಗತಿ : 2023 ರ ಲಾಜಿಸ್ಟಿಕ್ಸ್ ಪೂರಕ ವರದಿ
Authored by:
Yallamma G