* ಉತ್ತರ ಪ್ರದೇಶದ ವಾರಣಾಸಿಯ ನಮೋ ಘಾಟ್‌ನಲ್ಲಿ ಕಾಶಿ ತಮಿಳು ಸಂಗಮಂ 2.0 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಮಾಡುವಾಗ ನೈಜ-ಸಮಯದ ಕೃತಕ ಬುದ್ಧಿಮತ್ತೆ (AI) ಆಧಾರಿತ ಭಾಷಾಂತರ ಸಾಧನವಾದ 'ಭಾಷಿಣಿ' ಅನ್ನು ತಮಿಳು ಅರ್ಥಮಾಡಿಕೊಂಡ ಪ್ರೇಕ್ಷಕರಿಗೆ ಬಳಸಲಾಯಿತು.
* ಕಾಶಿ ತಮಿಳು ಸಂಗಮಂ 2023 ಭಾರತ ಸರ್ಕಾರದ ಒಂದು ಉಪಕ್ರಮವಾಗಿದೆ. ಇದು ಏಕ್ ಭಾರತ್ ಶ್ರೇಷ್ಠ ಭಾರತ್‌ನ ಸ್ಪೂರ್ತಿಯನ್ನು ಎತ್ತಿ ಹಿಡಿಯಲು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿದೆ. ಕಾಶಿ ತಮಿಳು ಸಂಗಮಂ (KTS) ನ ಎರಡನೇ ಆವೃತ್ತಿಯನ್ನು ಡಿಸೆಂಬರ್ 17 ರಿಂದ 30, 2023 ರಿಂದ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸರ್ಕಾರದ ಏಕ್ ಭಾರತ್ ಶ್ರೇಷ್ಠ ಭಾರತ ಯುವ ಸಂಗಮ ಕಾರ್ಯಕ್ರಮದ ಭಾಗವಾಗಿದೆ.
* 'ಭಾಷಿಣಿ' ಎಂಬುದು AI ಆಧಾರಿತ ಭಾಷಾ ಅನುವಾದ ವ್ಯವಸ್ಥೆಯಾಗಿದ್ದು, ಈ ಭಾಷೆಯನ್ನ ಅರ್ಥಮಾಡಿಕೊಳ್ಳದ ಇತರ ಭಾರತೀಯ ಭಾಷೆಗಳನ್ನ ಮಾತನಾಡುವವರೊಂದಿಗೆ ಮಾತನಾಡುವಾಗ ಜನರು ತಮ್ಮ ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಅನುವು ಮಾಡಿಕೊಡುತ್ತದೆ.
ಬುಧವಾರ, 20 ಡಿಸೆಂಬರ್ 2023
4:45 ಅಪರಾಹ್ನ
Daily PDF
ಕಾಶಿ-ತಮಿಳು ಸಂಗಮದಲ್ಲಿ ಪ್ರಧಾನಿ ಮೋದಿ ಅವರು ಭಾಷಣವನ್ನು ಭಾಷಾಂತರಿಸಲು AI ಉಪಕರಣವನ್ನು ಬಳಕೆ
Authored by:
Bhagya R K