* ಭಾರತದ ಸ್ಯಾಟಲೈಟ್ ಮ್ಯಾನ್ ಎಂದು ಪ್ರಸಿದ್ಧರಾಗಿದ್ದ ಉಡುಪಿ ರಾಮಚಂದ್ರ ರಾವ್ (UR.ರಾವ್) ಅವರ 89ನೇ ಜನ್ಮದಿನವನ್ನು ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವಿಸಲಾಗಿದೆ.
* ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಸಾಧಿಸಿದ ಪ್ರೊ.ಯು.ಆರ್.ರಾವ್ ಅವರನ್ನು ಭಾರತೀಯ ಬ್ಯಾಹಾಕಾಶ ಕಾರ್ಯಕ್ರಮಗಳ ಪಿತಾಮಹ ಎಂದು ಕರೆಯಲಾಗುತ್ತದೆ.
* ಯು.ಆರ್.ರಾವ್. ಇವರ ಸಾಧನೆಗೆ 1976ರಲ್ಲಿ ಪದ್ಮಭೂಷಣ ಹಾಗೂ 2017ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳು ಸಂದಿವೆ. 2013ರಲ್ಲಿ ಅಮೆರಿಕಾದ ಪ್ರತಿಷ್ಠಿತ 'ಸ್ಯಾಟ್‌ಲೈಟ್ ಹಾಲ್‌ಆಪ್ ಪೇಮ್ ಹಾಗೂ 2016ರಲ್ಲಿ ಮೆಕ್ಸಿಕೋದಲ್ಲಿ IAF ಹಾಲ್ ಆಫ್ ಫೇವ್' ಗೌರವ ಪಡೆದ ಮೊದಲ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್ ಆಗಿದ್ದಾರೆ.
* 1932ರಲ್ಲಿ ಕರ್ನಾಟಕದ ಉಡುಪಿಯ ಅದಮಾರಿನಲ್ಲಿ ಜನಿಸಿದ್ದಾರೆ. ಪ್ರೊ.ಯು.ಆರ್.ರಾವ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಾನೆತ್ತರದ ಸಾಧನೆ ಮಾಡಿದವರು.
* 1984 ರಿಂದ 1994ರವರೆಗೆ ಇಸ್ರೋ ಚೇರ್ಮನ್ ಆಗಿದ್ದ ರಾವ್, 1975ರಲ್ಲಿ ದೇಶದ ಮೊದಲ ಸ್ಯಾಟ್‌ಲೈಟ್ 'ಆರ್ಯಭಟ' ಯಶಸ್ವಿ ಉಡಾವಣೆಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದರು.
* ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 360ಕ್ಕೂ ಹೆಚ್ಚು ಸಂಶೋಧಾನ್ಯಕ ಲೇಖನ ಹಾಗೂ ಹಲವು ಪುಸ್ತಕಗಳನ್ನು ಬರೆದಿದ್ದಾರೆ.
* ಅಮೆರಿಕಾದ ಟೆಕ್ಸಾಸ್ ವಿವಿಯಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಳಿಕ 1966ರಲ್ಲಿ ಭಾರತಕ್ಕೆ ಮರಳಿದ ರಾವ್, ಇಸ್ರೋ ಸಂಸ್ಥೆ ಸೇರಿ ಬಾಹ್ಯಾಕಾಶ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದ್ದರು.
ಬಾಹ್ಯಾಕಾಶ ವಿಜ್ಞಾನಿ 'ರಾಮಚಂದ್ರ ರಾವ್' ಸಾಧನೆಗೆ ಡೂಡಲ್ ಗೌರವ
Published by Bhagya R K
25 ಆಗಸ್ಟ್ 2023